ಶಿವಮೊಗ್ಗ ಜನಶತಾಬ್ದಿ, ಇಂಟರ್‌ಸಿಟಿ, ಮೈಸೂರು ಎಕ್ಸ್‌ಪ್ರೆಸ್‌ ರೈಲುಗಳು ಗಂಟೆಗಟ್ಟಲೆ ವಿಳಂಬ, ಕಾರಣವೇನು?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ರೈಲ್ವೆ ಸುದ್ದಿ: ಇಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಶಿವಮೊಗ್ಗ – ಭದ್ರಾವತಿ ಮಧ್ಯೆ ರೈಲ್ವೆ ಲೈನ್‌ (Railway track) ಮೇಲೆ ಮರ ಉರುಳಿದೆ. ರೈಲ್ವೆ ವಿದ್ಯುತ್‌ ಲೈನ್‌ (Railway electrification line) ತುಂಡಾಗಿದ್ದು, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಶಿವಮೊಗ್ಗ – ಭದ್ರಾವತಿ ನಡುವಿನ ರೈಲ್ವೆ ಕಿಲೋ ಮೀಟರ್‌ 57ರಲ್ಲಿ ಮರ ಉರುಳಿದೆ. ಇದರಿಂದಾಗಿ ರೈಲ್ವೆ ವಿದ್ಯುತ್‌ ಲೈನ್‌ ತುಂಡಾಗಿದೆ.

Night-Train-at-Shimoga-railway-station.

ಚಿಕ್ಕಮಗಳೂರು ರೈಲು ವಾಪಸ್‌

ಮರ ಬಿದ್ದ ಕೆಲವೇ ನಿಮಿಷಗಳಲ್ಲಿ ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೆಂಜರ್‌ ರೈಲು (Chikkamagaluru passenger train) ಆ ಸ್ಥಳಕ್ಕೆ ತಲುಪಿತ್ತು. ವಿದ್ಯುತ್‌ ಲೈನ್‌ ತುಂಡಾಗಿದ್ದರಿಂದ ರೈಲು ಚಲಿಸದಾಯಿತು. ಸ್ವಲ್ಪ ಸಮಯದ ಬಳಿಕ ರೈಲ್ವೆ ಸಿಬ್ಬಂದಿ (Railway staff) ಸ್ಥಳಕ್ಕೆ ತೆರಳಿ ಚಿಕ್ಕಮಗಳೂರು ಪ್ಯಾಸೆಂಜರ್‌ ರೈಲನ್ನು ಶಿವಮೊಗ್ಗಕ್ಕೆ ಹಿಂದಕ್ಕೆ ತಂದಿದ್ದಾರೆ.

ರೈಲ್ವೆ ಲೈನ್‌ ದುರಸ್ತಿ ಕಾರ್ಯ

ಇನ್ನು, ರೈಲ್ವೆ ವಿದ್ಯುತ್ ಲೈನ್‌ ತುಂಡಾಗಿರುವುದರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ (Train services disrupted). ಸ್ಥಳಕ್ಕೆ ತೆರಳಿದ ರೈಲ್ವೆ ಸಿಬ್ಬಂದಿ ವಿದ್ಯುತ್‌ ಲೈನ್‌ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದ್ದಾರೆ. ರೈಲ್ವೆ ವಿದ್ಯುತ್‌ ಲೈನ್‌ ದುರಸ್ತಿ ಕಾರ್ಯ ನಡೆಸಿದ ಬಳಿಕ ರೈಲುಗಳ ಸಂಚಾರ ಪುನಾರಂಭವಾಗಿದೆ.

ಯಾವ್ಯಾವ ರೈಲುಗಳಿಗೆ ಸಮಸ್ಯೆಯಾಗಿದೆ?

ರೈಲ್ವೆ ವಿದ್ಯುತ್‌ ಲೈನ್‌ ಹಾನಿ ಆಗಿದ್ದರಿಂದ ಶಿವಮೊಗ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ವಿವಿಧ ರೈಲುಗಳು ಮಾರ್ಗ ಮಧ್ಯದಲ್ಲೇ ನಿಂತಿವೆ.

  • ರೈಲು 1: ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೇಂಜರ್‌ ರೈಲು: ಸಂಜೆ 6:35ಕ್ಕೆ ಶಿವಮೊಗ್ಗದಿಂದ ಹೊರಟಿದ್ದ ರೈಲು ಮಾರ್ಗ ಮಧ್ಯೆ ಮರ ಬಿದ್ದಿದ್ದರಿಂದ ಹಿಂದಕ್ಕೆ ಮರಳಿದೆ.
  • ರೈಲು 2: ಬೆಂಗಳೂರು – ಶಿವಮೊಗ್ಗ – ತಾಳಗುಪ್ಪ ಇಂಟರ್‌ಸಿಟಿ: ಸಂಜೆ 6:41ಕ್ಕೆ ತರೀಕೆರೆಯಿಂದ ಹೊರಟಿದ್ದ ರೈಲನ್ನು ಮಾರ್ಗ ಮಧ್ಯೆ ನಿಲ್ಲಿಸಲಾಗಿತ್ತು. ರಾತ್ರಿ 8:27ಕ್ಕೆ ಭದ್ರಾವತಿಗೆ ಆಗಮಿಸಿದ್ದ ರೈಲು ರಾತ್ರಿ 10:09ಕ್ಕೆ ಅಲ್ಲಿಂದ ಹೊರಟಿತ್ತು. ರಾತ್ರಿ 10:25ಕ್ಕೆ ಶಿವಮೊಗ್ಗ ನಿಲ್ದಾಣ (Shivamogga railway station) ತಲುಪಿದೆ.
  • ರೈಲು 3: ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ ರೈಲು: ರಾತ್ರಿ 9 ಗಂಟೆಗೆ ತರೀಕೆರೆಗೆ ಬಂದಿದ್ದ ರೈಲು ರಾತ್ರಿ 10:17ರವರೆಗೆ ಅಲ್ಲಿಯೇ ಇತ್ತು. ಬಳಿಕ ಸಂಚಾರ ಪುನಾರಂಭವಾಗಿದೆ (Resumed service).
  • ರೈಲು 4: ಮೈಸೂರು – ಶಿವಮೊಗ್ಗ ಕುವೆಂಪು ಎಕ್ಸ್‌ಪ್ರೆಸ್‌: ತರೀಕೆರೆಯಲ್ಲಿ ಕೆಲವು ಹೊತ್ತು ನಿಲುಗಡೆ ನೀಡಲಾಗಿತ್ತು. ರಾತ್ರಿ 8:49ರಿಂದ ರಾತ್ರಿ 10:13ರವರೆಗೆ ಮಸರಹಳ್ಳಿಯಲ್ಲಿ ನಿಲುಗಡೆ ಮಾಡಲಾಗಿತ್ತು (Train delay). ರಾತ್ರಿ 10:17ಕ್ಕೆ ಭದ್ರಾವತಿ ನಿಲ್ದಾಣಕ್ಕೆ ತಲುಪಿರುವ ರೈಲು ಅಲ್ಲಿಂದ ಶಿವಮೊಗ್ಗದತ್ತ ಹೊರಟಿದೆ.
ಹೆಚ್ಚಿನ Shimoga News, Shivamogga News ಮತ್ತು TRAIN / BUS TIMINGS ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಮೇ 17, 2026