ರೈಲ್ವೆ ಸುದ್ದಿ: ಹಬ್ಬನಗಟ್ಟ ಮತ್ತು ಅರಸೀಕೆರೆ ನಡುವಿನ ಲೈನ್ ಬ್ಲಾಕ್ ವ್ಯವಸ್ಥೆಗಳ ಹಿನ್ನೆಲೆ ಕೆಲವು ರೈಲುಗಳು ರದ್ದು, ಕೆಲವು ರೈಲುಗಳು (Trains) ಭಾಗಶಃ ರದ್ದುಪಡಿಸಲಾಗಿತ್ತು. ಇನ್ನು ಕೆಲವು ರೈಲುಗಳನ್ನು ನಿಯಂತ್ರಿಸಲಾಗಿತ್ತು. ಈಗ ಈ ರೈಲುಗಳು ಈ ಹಿಂದಿನಂತೆ ನಿಗದಿತ ವೇಳಾಪಟ್ಟಿ ಹಾಗೂ ಮಾರ್ಗದಂತೆ ಪುನಃ ಚಾಲನೆಗೊಳ್ಳಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ್ಯಾವ ರೈಲುಗಳು?
ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್, ಮೇ 10ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ.
ರೈಲು ಸಂಖ್ಯೆ 16206 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್, ಮೇ 10ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ » ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಯಾವ್ಯಾವ ರೈಲು ಯಾವ ಟೈಮ್‌ಗೆ ಹೊರಡಲಿದೆ?
ರೈಲು ಸಂಖ್ಯೆ 16205 ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್, ಮೇ 10ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ.
ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್, ಮೇ 10ರಂದು ಆರಂಭವಾಗುವ ಪ್ರಯಾಣ, ಮೊದಲು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗಿದ್ದು, ಇದೀಗ ಪೂರ್ಣ ಮಾರ್ಗದಲ್ಲಿ ಚಾಲನೆಗೊಳ್ಳಲಿದೆ.
ರೈಲು ಸಂಖ್ಯೆ 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್, ಮೇ 10ರಂದು ಆರಂಭವಾಗುವ ಪ್ರಯಾಣ, ಮೊದಲು ಮಾರ್ಗಮಧ್ಯದಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200