ಮೈಸೂರು – ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲು ಎರಡು ದಿನ ಭಾಗಶಃ ರದ್ದು, ಯಾವ ದಿನ? ಇಲ್ಲಿದೆ ಅಪ್‌ಡೇಟ್‌

ರೈಲ್ವೆ ಸುದ್ದಿ: ಕೋರಮಂಗಲ ಯಾರ್ಡ್‌ನಲ್ಲಿ ಸುರಕ್ಷಾ ಮತ್ತು ಟ್ರ್ಯಾಕ್ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಕೆಲವು ರೈಲು (Trains) ಸೇವೆಗಳನ್ನು ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಜೂನ್ 20 ಮತ್ತು 22, 2025 ರಂದು ಸಂಪೂರ್ಣ ರದ್ದುಗೊಳಿಸಲಾಗಿದೆ.

https://chat.whatsapp.com/JPJ0lTQsTKf365Fqu6Q7cd

ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಮೈಸೂರು ಮತ್ತು ಅರಸೀಕೆರೆ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಗೊಳಿಸಲಾಗುತ್ತದೆ. ಜೂನ್ 20 ಮತ್ತು 22, 2025 ರಂದು ಈ ರೈಲು ಅರಸೀಕೆರೆಯಿಂದ ಶಿವಮೊಗ್ಗ ಟೌನ್‌ವರೆಗೆ ಮಾತ್ರ ಓಡಿಸಲಾಗುತ್ತದೆ ಮತ್ತು ಅರಸೀಕೆರೆಯಿಂದ ನಿಗದಿತ ವೇಳೆಯಲ್ಲಿ ಹೊರಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ » ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ, ಎಷ್ಟು ದಿನ? ಕಾರಣವೇನು?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
Prayanikare-Gamanisi-Indian-Railway-News

Leave a Comment