ಸ್ವ ಉದ್ಯೋಗ ತರಬೇತಿ, ಊಟ, ವಸತಿ ಉಚಿತ, ಯಾರೆಲ್ಲ ಅರ್ಹರು? ಏನೆಲ್ಲ ತರಬೇತಿ ನೀಡಲಾಗುತ್ತದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಹೊಳಲೂರು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ (Training) ಸಂಸ್ಥೆಯು ಎಂಬ್ರಾಯಿಡರಿ ಮತ್ತು ಸೆಲ್‌ಫೋನ್ ದುರಸ್ತಿ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ಅಭ್ಯರ್ಥಿಯು 18ರಿಂದ 45 ವರ್ಷದೊಳಗಿದ್ದು 8ನೇ ತರಗತಿ ಉತ್ತೀರ್ಣರಾಗಿರಬೇಕು. ಗ್ರಾಮೀಣ ಪ್ರದೇಶದವರಾಗಿದ್ದು ಬಿಪಿಎಲ್ ಕಾರ್ಡ್ ಹೊಂದಿರಬೇಕು.
  • ತರಬೇತಿ ಬಳಿಕ ಸ್ವಉದ್ಯೋಗ ಪ್ರಾರಂಭಿಸಬೇಕು. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ಉಚಿತವಾಗಿರುತ್ತದೆ.
  • ಎಂಬ್ರಾಯಿಡರಿ ತರಬೇತಿ ಸೆಪ್ಟೆಂಬರ್ 1ರಿಂದ 31 ದಿನ. ಸೆಲ್ ಫೋನ್ ದುರಸ್ತಿ ತರಬೇತಿ ಸೆಪ್ಟೆಂಬರ್ 24ರಿಂದ 30 ದಿನ ನಡೆಯಲಿದೆ.

ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂಬರ್, ವಿದ್ಯಾರ್ಹತೆ ಮತ್ತು ವಯಸ್ಸಿನ ವಿವರ ಇರುವ ಅರ್ಜಿಯನ್ನು ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹೊನ್ನಾಳಿ ರಸ್ತೆ, ಹೊಳಲೂರು-577216, ಶಿವಮೊಗ್ಗ ತಾಲೂಕು, ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೊ. 9743429595, 8722384541 ಸಂಪರ್ಕಿಸಿ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿಗಳು

Canara Bank Training 

Leave a Comment