ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದರಿಂದ ತುಂಗಾ ಜಲಾಶಯದ (Dam Level) ಒಳ ಹರಿವು ಇವತ್ತು ಇಳಿಕೆಯಾಗಿದೆ.
ಗಾಜನೂರಿನ ತುಂಗಾ ಜಲಾಶಯಕ್ಕೆ ಇವತ್ತು 39,188 ಕ್ಯೂಸೆಕ್ ಒಳ ಹರಿವು ಇದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇಂದು 38,239 ಕ್ಯೂಸೆಕ್ ಹೊರಹರಿವು ಇದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ತುಂಗಾ ಜಲಾಶಯದಲ್ಲಿ ಸದ್ಯ 2.101 ಟಿಎಂಸಿ ನೀರಿನ ಸಂಗ್ರಹವಿದೆ. ನೀರಿನ ಮಟ್ಟ 587.69 ಮೀಟರ್‌ನಷ್ಟಿದೆ.
ಇದನ್ನೂ ಓದಿ » ರಾಗಿಗುಡ್ಡದಲ್ಲಿ ದೇವರ ಮೂರ್ತಿ ಕಿತ್ತೊಗೆದ ಕಿರಾತಕರು, ಬಿಗುವಿನ ವಾತಾವರಣ, ಈತನಕ ಏನೇನಾಯ್ತು? ಕಂಪ್ಲೀಟ್ ರಿಪೋರ್ಟ್
