ಲಿಂಗನಮಕ್ಕಿ ಜಲಾಶಯದಿಂದ ಮೊದಲ ಎಚ್ಚರಿಕೆ, ಯಾವುದೇ ಸಂದರ್ಭ ಗೇಟ್‌ಗಳ ಮೂಲಕ ನೀರು ಹೊರಕ್ಕೆ

ಸಾಗರ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಸಂದರ್ಭ ನೀರು ಹೊರ ಬಿಡುವ ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು, ಪ್ರವಾಸಿಗರು ನದಿಗೆ ಇಳಿಯಬಾರದು ಎಂದು ಕರ್ನಾಟಕ ವಿದ್ಯುತ್‌ ನಿಗಮ ಎಚ್ಚರಿಕೆ (Warning) ನೀಡಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಮಂಗಳವಾರ ಜಲಾಶಯದ ನೀರಿನ ಮಟ್ಟ 1801.10 ಅಡಿಗೆ ತಲುಪಿತ್ತು. ಅಲ್ಲದೆ 32 ಸಾವಿರ ಕ್ಯೂಸೆಕ್‌ ಒಳ ಹರಿವು ಕೂಡ ಇತ್ತು. ಇದೇ ರೀತಿ ಒಳ ಹರಿವು ಮುಂದುವರೆದರೆ ಜಲಾಶಯದ ನೀರಿನ ಮಟ್ಟ ಶೀಘ್ರ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಂದರ್ಭ ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದ NH ಆಸ್ಪತ್ರೆಯಲ್ಲಿ ಸರ್ವೈವರ್ಸ್‌ ಕ್ಲಿನಿಕ್‌, ಜು.17ರಂದು ಕ್ಯಾನ್ಸರ್‌ ಬಗ್ಗೆ ಮಹತ್ವದ ಚರ್ಚೆ, ಏನಿದು ಕ್ಲಿನಿಕ್‌?

ಅಣೆಕಟ್ಟೆಯ ಕೆಳದಂಡೆಯಲ್ಲಿ ವಾಸಿಸುತ್ತಿರುವವರು, ನದಿ ಪಾತ್ರದಲ್ಲಿ ಇರುವವರು ಕೂಡಲೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಪ್ರವಾಸಿಗರು ಕೂಡ ನೀರಿಗೆ ಇಳಿಯಬಾರದು ಎಂದು ಕೆಪಿಸಿಯ ಕಾರ್ಯನಿರ್ವಾಹಕ ಇಂಜಿನಿಯರ್‌ ತಿಳಿಸಿದ್ದಾರೆ.

Leave a Comment