ತುಂಗಾ, ಭದ್ರಾ, ಲಿಂಗನಮಕ್ಕಿ ಡ್ಯಾಮ್‌ಗಳ ಒಳ ಹರಿವು ಸಂಪೂರ್ಣ ಕುಸಿತ, ಇವತ್ತು ಎಷ್ಟಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DAM LEVEL, 10 AUGUST 2024 : ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಹಾಗಾಗಿ ಜಲಾಶಯಗಳ ಒಳ ಹರಿವು ಇಳಿಕೆಯಾಗಿದೆ.

EBEDEF -DAM-LEVEL-LINGANAMAKKI-DAM.webpಲಿಂಗನಮಕ್ಕಿ ಜಲಾಶಯದ ಒಳ ಹರಿವು ಮತ್ತಷ್ಟು ಕುಸಿತ ಕಂಡಿದೆ. ಇವತ್ತು 12,442 ಕ್ಯೂಸೆಕ್‌ ಒಳ ಹರಿವು ಇದೆ. 6,089 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 1816.60 ಅಡಿ ಇದೆ. ಒಟ್ಟು 151.64 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 143.36 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ ⇒ ಅಡಿಕೆ ಧಾರಣೆ | 9 ಆಗಸ್ಟ್‌ 2024‌ | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

EBEDEF - DAM-LEVEL-TUNGA-DAM.webpಗಾಜನೂರಿನ ತುಂಗಾ ಜಲಾಶಯದ ಒಳ ಮತ್ತು ಹೊರ ಹರಿದು ಪ್ರಮಾಣವು ಕಡಿಮೆಯಾಗಿದೆ. 10,066 ಕ್ಯೂಸೆಕ್‌ ಒಳ ಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹೊರ ಹರಿವು ಕಡಿಮೆ ಆಗಿರುವುದರಿಂದ ಶಿವಮೊಗ್ಗದಲ್ಲಿ ತುಂಗಾ ನದಿಯ ನೀರಿನ ಮಟ್ಟ ಇಳಿಕೆಯಾಗಿದೆ.

ಇದನ್ನೂ ಓದಿ ⇒ ನಾಗರ ಪಂಚಮಿಯಂದೆ ಹಾವು ಕಡಿದು ಬಾಣಂತಿ ಸಾವು

EBEDEF - DAM-LEVEL-BHADRA-DAM.webpಭದ್ರಾ ಜಲಾಶಯದ ಒಳ ಹರಿವು ಕೂಡ ತಗ್ಗಿದೆ. ಇವತ್ತು 7468 ಕ್ಯೂಸೆಕ್‌ ಒಳ ಹರಿವು ಇದೆ. 6311 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾಶಯದಲ್ಲಿನ ಇವತ್ತಿನ ನೀರಿನ ಮಟ್ಟ 180.5 ಅಡಿಯಷ್ಟಿದೆ. ಪ್ರಸ್ತುತ ಜಲಾಶಯದಲ್ಲಿ 64.75 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ ⇒ ಶಿಕಾರಿಪುರದಲ್ಲಿ ಬೆಕ್ಕು ಕಚ್ಚಿ ಮಹಿಳೆ ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment