ತುಂಗಾ, ಭದ್ರ, ಲಿಂಗನಮಕ್ಕಿ ಜಲಾಶಯಗಳಿಗೆ ಒಳ ಹರಿವು ತುಸು ಹೆಚ್ಚಳ, ಇವತ್ತು ಎಷ್ಟಿದೆ ನೀರಿನ ಮಟ್ಟ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

DAM LEVEL, 16 AUGUST 2024 : ಮಲೆನಾಡು ಭಾಗದಲ್ಲಿ ಪುನಃ ಮಳೆಯಾಗುತ್ತಿದೆ. ಆಗಾಗ ರಭಸವಾಗಿ ಮಳೆಯಾಗಿ ನಿಲ್ಲುತ್ತಿದೆ. ಇದರಿಂದ ಜಲಾಶಯಗಳಿಗೆ ಪುನಃ ಒಳ ಹರಿವು ಶುರುವಾಗಿದೆ.

EBEDEF -DAM-LEVEL-LINGANAMAKKI-DAM.webpಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು 7643 ಕ್ಯೂಸೆಕ್‌ ಒಳ ಹರಿವು ಇದೆ. ಹಾಗಾಗಿ 7504 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 1816.85 ಅಡಿಗೆ ತಲುಪಿದೆ. ಇನ್ನು, ಜಲಾಶಯವು 151.64 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇವತ್ತು 144.50 ಟಿಎಂಸಿ ನೀರು ಸಂಗ್ರಹವಾಗಿದೆ.

EBEDEF - DAM-LEVEL-TUNGA-DAM.webpತುಂಗಾ ಜಲಾಶಯದ ಒಳ ಹರಿವು ತುಸು ಏರಿಕೆಯಾಗಿದೆ. ಇವತ್ತು 10,969 ಕ್ಯೂಸೆಕ್‌ ಒಳ ಹರಿವು ಇದೆ. ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದರಿಂದ ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ನೀರಿನ ಹರಿವು ಮುಂದುವರೆದಿದೆ.

EBEDEF - DAM-LEVEL-BHADRA-DAM.webpಭದ್ರಾ ಜಲಾಶಯಕ್ಕು ಉತ್ತಮ ಒಳ ಹರಿವು ಇದೆ. ಇವತ್ತು 8419 ಕ್ಯೂಸೆಕ್‌ ಒಳ ಹರಿವು ಇದೆ. 7841 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 180.2 ಅಡಿ ಇದೆ. ಪ್ರಸ್ತುತ ಜಲಾಶಯದಲ್ಲಿ 64.37 ಟಿಎಂಸಿ ನೀರು ಸಂಗ್ರಹವಾಗಿದೆ.‌

ಇದನ್ನೂ ಓದಿ ⇒ ಸಾಗರದಲ್ಲಿ ಭಾರಿ ಮಳೆಗೆ ಮೋರಿ ಕುಸಿತ, ರಸ್ತೆ ಸಂಪರ್ಕ ಕಡಿತ

ಹೆಚ್ಚಿನ Shimoga News, Shivamogga News ಮತ್ತು WEATHER REPORT ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಆಗಷ್ಟ್ 16, 2024

Leave a Comment