ತುಂಗಾ ಡ್ಯಾಂ ಒಳ ಹರಿವು ಕುಸಿತ, ಭದ್ರಾಗೆ ತುಸು ಹೆಚ್ಚಳ, ಲಿಂಗನಮಕ್ಕಿಯಲ್ಲಿ ನೀರಿನ ಮಟ್ಟ ಎಷ್ಟಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 22 JULY 2024

DAM LEVEL : ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತಗ್ಗಿದೆ. ಹಾಗಾಗಿ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ.

ಯಾವ್ಯಾವ ಜಲಾಶಯಕ್ಕೆ ಎಷ್ಟಿದೆ ಒಳ ಹರಿವು?

DAM-LEVEL-LINGANAMAKKI-DAM.webpಲಿಂಗನಮಕ್ಕಿ ಜಲಾಶಯದ ಒಳ ಹರಿವು 44,387 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಭಾನುವಾರ 48 ಸಾವಿರ ಕ್ಯೂಸೆಕ್‌ ಒಳಹರಿವು ಇತ್ತು. 1898 ಕ್ಯೂಸೆಕ್‌ ಹೊರ ಹರಿವು ಇದೆ. ಇನ್ನು, ಜಲಾಶಯದ ನೀರಿನ ಮಟ್ಟ 1797.60 ಅಡಿಗೆ ತಲುಪಿದೆ. ಜಲಾಶಯದಲ್ಲಿ ಒಟ್ಟು 151.64 ಟಿಎಂಸಿ ನೀರು ಸಂಗ್ರಹವಾಗಲಿದೆ. ಈವರೆಗೆ 90.14 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ.


DAM-LEVEL-TUNGA-DAM.webpತುಂಗಾ ಜಲಾಶಯದ ಒಳ ಹರಿವು ಪ್ರಮಾಣವು ಕಡಿಮೆಯಾಗಿದೆ. ಇವತ್ತು 34,150 ಕ್ಯೂಸೆಕ್‌ ಒಳ ಹರಿವು ಇದೆ. ಭಾನುವಾರ 53 ಸಾವಿರ ಕ್ಯೂಸೆಕ್‌ ಒಳ ಹರಿವು ಇತ್ತು. ಈಗಾಗಲೇ ಜಲಾಶಯ ಭರ್ತಿ ಅಗಿರುವ ಹಿನ್ನೆಲೆ, ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹೊರ ಹರಿವು ಕಡಿಮೆಯಾದ ಹಿನ್ನೆಲೆ ತುಂಗಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.


DAM-LEVEL-BHADRA-DAM.webpಭದ್ರಾ ಜಲಾಶಯದ ಒಳ ಹರಿವು ತುಸು ಹೆಚ್ಚಾಗಿದೆ. ಇವತ್ತು 25,367 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಭಾನುವಾರ 23 ಸಾವಿರ ಕ್ಯೂಸೆಕ್‌ ಒಳ ಹರಿವು ಇತ್ತು. ಜಲಾಶಯದ ನೀರಿನ ಮಟ್ಟ 166.6 ಅಡಿಗೆ ತಲುಪಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ ಈವರೆಗೆ 49.24 ಟಿಎಂಸಿ ನೀರು ಸಂಗ್ರಹವಾಗಿದೆ.


ಇದನ್ನೂ ಓದಿ ⇓

ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ಮಳೆ, ಹೇಗಿದೆ ವಾತಾವರಣ? ಶಾಲೆ, ಕಾಲೇಜು ಪುನಾರಂಭ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment