SHIVAMOGGA LIVE NEWS | 25 JULY 2024 (ಈ ಸುದ್ದಿಯನ್ನು ಇನ್ನು 57 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗ ಲೈವ್.ಕಾಂ : ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ (Dam Level) ಒಳ ಹರಿವು ಹೆಚ್ಚಳವಾಗಿದೆ. ಇವತ್ತು ಯಾವ್ಯಾವ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರ ಇಲ್ಲಿದೆ.
ಲಿಂಗನಮಕ್ಕಿ ಜಲಾಶಯ ಉತ್ತಮ ಒಳ ಹರಿವು ಇದೆ. ಇವತ್ತು 53,371 ಕ್ಯೂಸೆಕ್ ಒಳ ಹರಿವು ಇದೆ. 1935 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ನೀರಿನ ಸಂಗ್ರಹ ಗರಿಷ್ಠ ಮಟ್ಟ 1819 ಅಡಿ. ಇವತ್ತು ನೀರಿನ ಮಟ್ಟ 1802.70 ಅಡಿಗೆ ತಲುಪಿದೆ.
ತುಂಗಾ ಜಲಾಶಯಕ್ಕೆ 53,670 ಕ್ಯೂಸೆಕ್ ಒಳ ಹರಿವು ಇದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮತ್ತಷ್ಟು ಒಳ ಹರಿವು ನಿರೀಕ್ಷಿಸಲಾಗಿದೆ.
ಭದ್ರಾ ಜಲಾಶಯಕ್ಕೆ ಇವತ್ತು 26,044 ಕ್ಯೂಸೆಕ್ ಒಳ ಹರಿವು ಇದೆ. 200 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 186 ಅಡಿ. ಇವತ್ತಿನ ನೀರಿನ ಮಟ್ಟ 171.6 ಅಡಿ.
ಇದನ್ನೂ ಓದಿ ⇓
ಇಡೀ ದಿನ ಶಿವಮೊಗ್ಗ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ವಕೀಲರು, ಕಾರಣವೇನು? – 5 ಫಟಾಫಟ್ ನ್ಯೂಸ್
