ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DAM LEVEL, 9 AUGUST 2024 : ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಆದ್ದರಿಂದ ಮೂರು ಪ್ರಮುಖ ಜಲಾಶಯಗಳ ಒಳ, ಹೊರ ಹರಿವು ಕಡಿಮೆಯಾಗಿದೆ.
ಶರಾವತಿ ಕಣಿವೆಯಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಇವತ್ತು 11,007 ಕ್ಯೂಸೆಕ್ ಒಳ ಹರಿವು ಇದೆ. 7,189 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 1816.45 ಅಡಿ ಇದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 151.64 ಟಿಎಂಸಿ. ಪ್ರಸ್ತುತ 143.09 ಟಿಎಂಸಿ ನೀರಿನ ಸಂಗ್ರಹವಿದೆ.
ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಕೂಡ ಇಳಿಕೆಯಾಗಿದೆ. 12,615 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.
ಭದ್ರಾ ಜಲಾಶಯದ ಒಳ ಹರಿವು ಕೂಡ ಕುಸಿತ ಕಂಡಿದೆ. 8825 ಕ್ಯೂಸೆಕ್ ಒಳ ಹರಿವು ಇದೆ. 6811 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 180.4 ಅಡಿ ಇದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 64.65 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ ⇓
ಟಿಪ್ಪರ್, ಬೈಕ್ ಮಧ್ಯೆ ಅಪಘಾತ, ಯುವಕ ಸಾವು, ಮತ್ತೊಬ್ಬ ಸ್ಥಿತಿ ಗಂಭೀರ
LATEST NEWS
- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು






