ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIMOGA, 25 AUGUST 2024 : ಜಿಲ್ಲೆಯಾದ್ಯಂತ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದೆ. ವಿವಿಧೆಡೆ ನಿರಂತರ ಮಳೆಯಾಗುತ್ತಿದೆ (Rain). ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿರುವ ಹಿನ್ನೆಲೆ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ.
ಕಳೆದ ಕೆಲವು ದಿನ ಮಳೆ ಬಿಡುವು ನೀಡಿತ್ತು. ಆಗಾಗ ಕೆಲ ಹೊತ್ತು ಜೋರು ಮಳೆಯಾಗಿ ನಿಲ್ಲುತ್ತಿತ್ತು. ಇವತ್ತು ನಿರಂತರ ಮಳೆ ಸುರಿಯುತ್ತಿದೆ.
ಇದನ್ನೂ ಓದಿ ⇒ ಶಿವಮೊಗ್ಗ ನಗರದ ಸಮೀಪ ಆನೆ ದಾಳಿಗೆ ವ್ಯಕ್ತಿ ಬಲಿ
ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಳೆಯಾಗ್ತಿದೆ?
ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಹೊಸನಗರದ ಕೋಡೂರು, ಮುಂಬಾರು, ಸೋನಲೆ, ಮೇಲಿನಬೆಸಿಗೆ, ಹೊಸೂರು ಸಂಪೆಕಟ್ಟೆ ಮಳೆ ಅಬ್ಬರಿಸುತ್ತಿದೆ. ಚಿಕ್ಕಜೇನಿ, ಮಾರುತಿಪುರ, ಅರಸಾಳು, ತೀರ್ಥಹಳ್ಳಿಯ ಹೊನ್ನೇತಾಳು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಬಿದರಗೋಡು, ಅರೇಹಳ್ಳಿ, ಹೆಗ್ಗೋಡು, ಹೊಸಹಳ್ಳಿ, ತೀರ್ಥಮತ್ತೂರು, ಸಾಲ್ಗೋಡು, ನೆರಟೂರು, ಆರಗ, ನೊಣಬೂರು, ಹಾದಿಗಲ್ಲು, ದೇಮ್ಲಾಪುರ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, ತ್ರಯಂಬಕಪುರದಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಉಳಿದಂತೆ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ ತಾಲೂಕಿನ ವಿವಿಧೆಡೆ ಭಾರಿಯಿಂದ ಸಾಧಾರಣ ಮಳೆಯಾಗುತ್ತಿದೆ. ಸೊರಬದಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಇದನ್ನೂ ಓದಿ ⇒ ದೇವಸ್ಥಾನದಲ್ಲಿ ಬೋನಿಗೆ ಬಿದ್ದ ಕರಡಿ ನೋಡಲು ಜನವೋ ಜನ




