ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAINFALL REPORT : ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಉತ್ತಮ ಮಳೆಯಾಗುತ್ತಿದೆ. ಇವತ್ತು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿವಮೊಗ್ಗ ಸೇರಿ 8 ಜಿಲ್ಲೆಗೆ ರೆಡ್ ಅಲರ್ಟ್
ದೇಶಾದ್ಯಂತ ಇವತ್ತು 8 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೇರಳ ರಾಜ್ಯದ ಕಾಸರಗೋಡು, ಕಣ್ಣೂರು, ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅತಿ ವೇಗವಾಗಿ ಮೇಲ್ಮೈ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ರಾತ್ರಿಯಿಂದಲೆ ಗಾಳಿ, ಮಳೆ ಅಬ್ಬರ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದಲೆ ಗಾಳಿ ಮತ್ತು ಮಳೆಯಾಗುತ್ತಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು, ತೀರ್ಥಮತ್ತೂರು, ಹೊಸಹಳ್ಳಿ, ಸಾಲ್ಗಡಿ, ತೂದೂರು, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ , ಹೊದಲ ಅರಳಾಪುರ, ಹೊಸಹಳ್ಳಿಯಲ್ಲಿ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ.
ಶಿವಮೊಗ್ಗ ತಾಲೂಕಿನ ಕೊರ್ಲಹಳ್ಳಿ, ಕೋಟೆಗಂಗೂರು, ತಮ್ಮಡಿಹಳ್ಳಿಯಲ್ಲಿ ಭಾರಿ ಮಳೆ, ಬಿದರೆ, ಹಸೂಡಿ, ಪಿಳ್ಳಂಗೆರೆ, ಸೂಗೂರು, ಅಬ್ಬಲಗೆರೆ, ಕೊನಗವಳ್ಳಿ, ರಾಮನಗರ, ಮಲ್ಲಾಪುರದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಹೊಸನಗರದ ಸೋನಲೆ, ಅಮೃತ, ಬಾಳೂರಿನಲ್ಲಿ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ.
ಸಾಗರದ ಕಲ್ಮನೆ, ಭೀಮನಕೋಣೆ, ತ್ಯಾಗರ್ತಿ, ಕೋಳೂರು, ಸೊರಬದ ಶಿಗ್ಗಾ, ಶಿಕಾರಿಪುರದ ಸಾಲೂರು, ಗಾಮಾ, ಕಲ್ಮನೆ, ಭದ್ರಾವತಿಯ ಅರಳಿಕೊಪ್ಪ, ಮಾವಿನಕೆರೆ, ಯರೆಹಳ್ಳಿ, ಅರಲಹಳ್ಳಿಯಲ್ಲಿ ಭಾರಿ ಮಳೆಯಾಗುತ್ತಿದೆ.
ಇದನ್ನೂ ಓದಿ ⇓
ಎರಡು ದಿನ ಶಿವಮೊಗ್ಗ ಜಿಲ್ಲೆಯ ಒಂದು ರೈಲು ಸ್ಥಗಿತ, ಒಂದು ರೈಲುಗೆ ಭಾಗಶಃ ಸಂಚಾರ ನಿರ್ಬಂಧ, ಯಾವ ರೈಲು?