ಹಾಟ್‌ ಬಾಕ್ಸ್‌ನಂತಾಗಿದೆ ಶಿವಮೊಗ್ಗ ಜಿಲ್ಲೆ, ಇವತ್ತು ಮಳೆ ಸಾಧ್ಯತೆ – ಇಂದಿನ ಹವಾಮಾನ ವರದಿ

Published On : ಏಪ್ರಿಲ್ 16, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಜಿಲ್ಲೆಯಾದ್ಯಂತ ಬಿಸಿಲಿ ಝಳ ಜೋರಿದೆ. ವಿಪರೀತ ಧಗೆಯಿಂದಾಗಿ ಜನ ಹೈರಾಣವಾಗಿದ್ದಾರೆ. ದಿನೇ ದಿನೆ ತಾಪಮಾನ (Weather) ಹೆಚ್ಚಳವಾಗುತ್ತಿದೆ. ಇವತ್ತೂ ಉಷ್ಣಾಂಶ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.

ಯಾವ್ಯಾವ ತಾಲೂಕಿನ ತಾಪಮಾನ ಎಷ್ಟಿರುತ್ತೆ?

ಶಿವಮೊಗ್ಗ ಮತ್ತು ಭದ್ರಾವತಿ: ಎರಡು ತಾಲೂಕುಗಳಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕನಿಷ್ಠ 22 ಡಿಗ್ರಿ ಇರಲಿದೆ. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಬಿಸಿಲಿನ ತೀವ್ರತೆ ಹೆಚ್ಚಿರಲಿದ್ದು.

WEATHER-REPORT-SHIMOGA-

ಶಿಕಾರಿಪುರ ಮತ್ತು ಸೊರಬ: ಶಿಕಾರಿಪುರದಲ್ಲಿ ಗರಿಷ್ಠ 37 ಡಿಗ್ರಿ ಹಾಗೂ ಕನಿಷ್ಠ 22 ಡಿಗ್ರಿ ತಾಪಮಾನ ಇರಲಿದೆ. ಮಧ್ಯಾಹ್ನ ಮಿಂಚು ಗುಡುಗು ಇರುವ ಸಾಧ್ಯತೆ ಇದೆ. ಸೊರಬದಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ‌ ಇದೆ. ಇಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುವ ಸಂಭವವಿದೆ.

ಸಾಗರ ಮತ್ತು ಹೊಸನಗರ: ಸಾಗರದಲ್ಲಿ ಗರಿಷ್ಠ 33 ಡಿಗ್ರಿ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಧ್ಯಾಹ್ನ ಮಳೆ ಬರುವ ಸಾಧ್ಯತೆ ಇದೆ. ಹೊಸನಗರದಲ್ಲಿ ಉಷ್ಣಾಂಶ 36 ಡಿಗ್ರಿ ತಲುಪಲಿದ್ದು, ಕನಿಷ್ಠ 22 ಡಿಗ್ರಿ ದಾಖಲಾಗಲಿದೆ. ಎರಡೂ ತಾಲೂಕುಗಳಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದ ವಾತಾರಣ ಇರಲಿದೆ. ಮಳೆಯಾಗುವ ನಿರೀಕ್ಷೆಯು ಇದೆ.

ಇದನ್ನೂ ಓದಿ : ಹಂಸಿಣಿ ನೀರಾನೆಯ ಕೊನೆಕ್ಷಣದ CCTV ದೃಶ್ಯಾವಳಿ ರಿಲೀಸ್‌, ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗ

ತೀರ್ಥಹಳ್ಳಿ: ಇವತ್ತು 33 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 20 ಡಿಗ್ರಿ ಇರಲಿದೆ. ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 16, 2026

Leave a Comment