ಶಿವಮೊಗ್ಗದಲ್ಲಿ ಮುಂದುವರೆದ ಬಿಸಿಲ ಬೇಗೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ರಿಪೋರ್ಟ್

SHIVAMOGGA LIVE NEWS | 21 JUNE 2024

WEATHER REPORT : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿದೆ. ಪುನಃ ಬೇಸಿಗೆಯಂತಹ ಬಿಸಿಲು ಆವರಿಸಿದೆ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 31 ಡಿಗ್ರಿ, ಕನಿಷ್ಠ 20 ಡಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ.

ಬೆಳಗ್ಗೆ 8ಕ್ಕೆ 25 ಡಿಗ್ರಿ, ಬೆಳಗ್ಗೆ 10ಕ್ಕೆ 27.4 ಡಿಗ್ರಿ, ಮಧ್ಯಾಹ್ನ 12ಕ್ಕೆ 27.1 ಡಿಗ್ರಿ, ಮಧ್ಯಾಹ್ನ 2ಕ್ಕೆ 25.6 ಡಿಗ್ರಿ, ಸಂಜೆ 4ಕ್ಕೆ23.8 ಡಿಗ್ರಿ, ಸಂಜೆ 6ಕ್ಕೆ 22.5 ಡಿಗ್ರಿ, ರಾತ್ರಿ 8ಕ್ಕೆ 21.2 ಡಿಗ್ರಿ, ರಾತ್ರಿ 10ಕ್ಕೆ 20.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ಭದ್ರಾವತಿಯಲ್ಲಿ ಗರಿಷ್ಠ 31 ಡಿಗ್ರಿ, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್.‌ ತೀರ್ಥಹಳ್ಳಿಯಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 24 ಡಿಗ್ರಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರದಲ್ಲಿ ಗರಿಷ್ಠ 31 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Kalleshwara-Enterprises.webp

ಇದನ್ನೂ ಓದಿ – ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ ಕುಸಿತ, ತಪ್ಪಿತು ದೊಡ್ಡ ಅನಾಹುತ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment