ಶಿವಮೊಗ್ಗದಲ್ಲಿ ಸ್ವಲ್ಪ ತಂಪು ವಾತಾವರಣ, ಇವತ್ತು ಮಳೆಯಾಗುತ್ತಾ? ಎಲ್ಲೆಲ್ಲಿ ಎಷ್ಟಿದೆ ತಾಪಮಾನ?

SHIVAMOGGA LIVE NEWS | 23 JUNE 2024 (ಈ ಸುದ್ದಿಯನ್ನು ಇನ್ನು 54 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

WEATHER REPORT : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ. ಹಾಗಾಗಿ ಸ್ವಲ್ಪ ತಂಪು ವಾತಾವರಣವಿದೆ. ಆದರೆ ತಾಪಮಾನ ಇಳಿಕೆಯಾಗಿಲ್ಲ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 31 ಡಿಗ್ರಿ, ಕನಿಷ್ಠ 22 ಡಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ.

ಬೆಳಗ್ಗೆ 7ಕ್ಕೆ 22 ಡಿಗ್ರಿ, ಬೆಳಗ್ಗೆ 8ಕ್ಕೆ 22.2 ಡಿಗ್ರಿ, ಬೆಳಗ್ಗೆ 10ಕ್ಕೆ 24.2 ಡಿಗ್ರಿ, ಮಧ್ಯಾಹ್ನ 12ಕ್ಕೆ 27.9 ಡಿಗ್ರಿ, ಮಧ್ಯಾಹ್ನ 2ಕ್ಕೆ 28 ಡಿಗ್ರಿ, ಸಂಜೆ 4ಕ್ಕೆ25.2 ಡಿಗ್ರಿ, ಸಂಜೆ 6ಕ್ಕೆ 23.7 ಡಿಗ್ರಿ, ರಾತ್ರಿ 8ಕ್ಕೆ 22 ಡಿಗ್ರಿ, ರಾತ್ರಿ 10ಕ್ಕೆ 20.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಭದ್ರಾವತಿಯಲ್ಲಿ ಗರಿಷ್ಠ 31 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್.‌ ತೀರ್ಥಹಳ್ಳಿಯಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 23 ಡಿಗ್ರಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರದಲ್ಲಿ ಗರಿಷ್ಠ 30 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಿಲ್ಲೆಯಾದ್ಯಂತ ಇವತ್ತು ಅಲ್ಲಲ್ಲಿ ಕೆಲ ಹೊತ್ತು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ – ಮಾತಿಗೆ ಮಾತು ಬೆಳೆದು ತಂದೆಯ ಹೊಟ್ಟೆಗೆ ಇರಿದು ಕೊಂದ ಅಪ್ರಾಪ್ತ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

WEATHER-REPORT-SHIMOGA-

Leave a Comment