ಶಿವಮೊಗ್ಗದಲ್ಲಿ ಕಡಿಮೆಯಾದ ಮಳೆ, ಹೆಚ್ಚಿದ ತಾಪಮಾನ, ಇವತ್ತು ಎಷ್ಟಿರುತ್ತೆ ಉಷ್ಣಾಂಶ? ಯಾವಾಗ ಮಳೆಯಾಗುತ್ತೆ?

SHIVAMOGGA LIVE NEWS | 23 MAY 2024

WEATHER REPORT : ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಮಳೆ ಕಡಿಮೆ ಇತ್ತು. ಬಿಸಿಲು ಜೋರಿತ್ತು. ಹಾಗಾಗಿ ತಾಪಮಾನ ತುಸು ಏರಿಕೆಯಾಗಿದೆ. ಇವತ್ತು ಜಿಲ್ಲೆಯಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ.

ಇವತ್ತು ಬೆಳಗ್ಗೆ 8 ಗಂಟೆಗೆ 27.6 ಡಿಗ್ರಿ ಸೆಲ್ಸಿಯಸ್‌, ಬೆಳಗ್ಗೆ 11ಕ್ಕೆ 31.4 ಡಿಗ್ರಿ ಸೆಲ್ಸಿಯಸ್‌, ಮಧ್ಯಾಹ್ನ 2ಕ್ಕೆ 34.2 ಡಿಗ್ರಿ, ಸಂಜೆ 5ಕ್ಕೆ 32.7 ಡಿಗ್ರಿ ಸೆಲ್ಸಿಯಸ್‌, ರಾತ್ರಿ 8 ಗಂಟೆಗೆ 26.4 ಡಿಗ್ರಿ, ರಾತ್ರಿ 11 ಗಂಟೆಗೆ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ಇದನ್ನೂ ಓದಿ – ಗಾಡಿಕೊಪ್ಪದಲ್ಲಿ ತಡೆಗೋಡೆಗೆ ಹಾನಿ, ಸ್ವಲ್ಪ ಯಾಮಾರಿದರೆ ದೊಡ್ಡ ಅನಾಹುತ ಫಿಕ್ಸ್

ಇವತ್ತು ಸಾಧಾರಣ ಮಳೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಸಂಜೆ 4 ಗಂಟೆ ನಂತರ ತುಸು ಮಳೆಯಾಗಲಿದೆ. ರಾತ್ರಿ 7, 8, 11 ಗಂಟೆ ಹೊತ್ತಿಗೆ ಮಳೆಯಾಗುವ ಸಂಭವವಿದೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 23, 2024 at 8:06 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 23, 2024

Leave a Comment