ಶಿವಮೊಗ್ಗದಲ್ಲಿ ತಗ್ಗಿದ ಮಳೆ, ಏರಿದ ಉಷ್ಣಾಂಶ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ ತಾಪಮಾನ?

SHIVAMOGGA LIVE NEWS | 31 MAY 2024 (ಈ ಸುದ್ದಿಯನ್ನು ಇನ್ನು 47 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

WEATHER REPORT : ಜಿಲ್ಲೆಯಲ್ಲಿ ಪೂರ್ವ ಮುಂಗಾರ ಸಂಪೂರ್ಣ ತಗ್ಗಿದೆ. ಹಾಗಾಗಿ ತಾಪಮಾನ ಕೂಡ ಏರಿಕೆಯಾಗುತ್ತಿದೆ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 34 ಡಿಗ್ರಿ, ಕನಿಷ್ಠ 22 ಡಿಗ್ರಿ ತಾಪಮಾನ ಇರಲಿದೆ.

ಬೆಳಗ್ಗೆ 9 ಗಂಟೆಗೆ 28.1 ಡಿಗ್ರಿ, ಬೆಳಗ್ಗೆ 11ಕ್ಕೆ 31.5, ಮಧ್ಯಾಹ್ನ 1 ಗಂಟೆಗೆ 32.6 ಡಿಗ್ರಿ, ಮಧ್ಯಾಹ್ನ 3ಕ್ಕೆ 29.6 ಡಿಗ್ರಿ, ಸಂಜೆ 5ಕ್ಕೆ 28.3 ಡಿಗ್ರಿ, ಸಂಜೆ 7ಕ್ಕೆ 24.9 ಡಿಗ್ರಿ, ರಾತ್ರಿ 9 ಗಂಟೆಗೆ 24 ಡಿಗ್ರಿ, ರಾತ್ರಿ 11 ಗಂಟೆಗೆ 23.6 ಡಿಗ್ರಿ ತಾಪಮಾನ ಇರಲಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಅಡಿಕೆ ಧಾರಣೆ | 30 ಮೇ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ಭದ್ರಾವತಿಯಲ್ಲಿ ಗರಿಷ್ಠ 34 ಡಿಗ್ರಿ, ಕನಿಷ್ಠ 22 ಡಿಗ್ರಿ. ತೀರ್ಥಹಳ್ಳಿಯಲ್ಲಿ ಗರಿಷ್ಠ 33 ಡಿಗ್ರಿ, ಕನಿಷ್ಠ 25 ಡಿಗ್ರಿ. ಹೊಸನಗರ, ಸಾಗರ, ಸೊರಬ, ಶಿಕಾರಿಪುರದಲ್ಲಿ ಗರಿಷ್ಠ 34 ಡಿಗ್ರಿ, ಕನಿಷ್ಠ 26 ಡಿಗ್ರಿ ಇರಲಿದೆ. ಇನ್ನು, ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

WEATHER-REPORT-SHIMOGA-

Leave a Comment