SHIVAMOGGA LIVE NEWS | 5 JULY 2024 (ಈ ಸುದ್ದಿಯನ್ನು ಇನ್ನು 51 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
WEATHER REPORT : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಆರಿದ್ರಾ ಮಳೆ ಅಬ್ಬರಕ್ಕೆ ಹಲವು ಕಡೆ ಆಸ್ತಿಪಾಸ್ತಿ ಮತ್ತು ಪ್ರಾಣ ಹಾನಿಯ ವರದಿಯಾಗಿದೆ. ಇವತ್ತು ಶಿವಮೊಗ್ಗ ತಾಲೂಕಿನಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಇನ್ನು ಶಿವಮೊಗ್ಗ ತಾಲೂಕಿನಲ್ಲಿ ಇವತ್ತು ಸಾಧಾರಣ ಮಳೆಯಾಗಲಿದೆ.
ಬೆಳಗ್ಗೆ 7 ಗಂಟೆಗೆ 22.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಬೆಳಗ್ಗೆ 9ಕ್ಕೆ 25 ಡಿಗ್ರಿ ಸೆಲ್ಸಿಯಸ್, ಬೆಳಗ್ಗೆ 11ಕ್ಕೆ 25.7 ಡಿಗ್ರಿ, ಮಧ್ಯಾಹ್ನ 1ಕ್ಕೆ 23.8 ಡಿಗ್ರಿ, ಮಧ್ಯಾಹ್ನ 3ಕ್ಕೆ 23.2 ಡಿಗ್ರಿ, ಸಂಜೆ 5ಕ್ಕೆ 22.7 ಡಿಗ್ರಿ, ರಾತ್ರಿ 7ಕ್ಕೆ 21.9 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಭದ್ರಾವತಿಯಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 25 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 27 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಇದನ್ನೂ ಓದಿ – ಬಸ್, ಕಾರು ಡಿಕ್ಕಿ, ಪಲ್ಟಿಯಾದ ಬಸ್, ಅಡಿ ಸಿಲುಕಿ ನಜ್ಜುಗುಜ್ಜಾದ ಕಾರು, ಚಾಲಕ ಸಾವು
