SHIVAMOGGA LIVE NEWS | 24 OCTOBER 2023
SHIMOGA : ನಗರದಲ್ಲಿ ದಸರಾ (Dasara) ಮೆರವಣಿಗೆ ವೀಕ್ಷಿಸಲು ದೊಡ್ಡ ಸಂಖ್ಯೆ ಜನ ಸೇರಿದ್ದರು. ಬಹುತೇಕರು ತಮ್ಮ ಮೊಬೈಲ್ಗಳಲ್ಲಿ (mobile) ಅದ್ಧೂರಿ ಮೆರವಣಿಗೆಯನ್ನು ಸೆರೆ ಹಿಡಿದರು.
ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಮೊಬೈಲ್ಗಳಲ್ಲಿ ಉತ್ಸವ ಮೂರ್ತಿಗಳ ಫೋಟೊ, ವಿಡಿಯೋ ಕ್ಲಿಕ್ಕಿಸಿಕೊಂಡರು. ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿ ಆಗಮಿಸುತ್ತಿದ್ದಂತೆ ಕೈ ಮುಗಿದು ಚಿತ್ರೀಕರಣ ಮಾಡಿದರು. ಆನೆಗಳ ಫೋಟೊ ತೆಗೆದು ಸಂಭ್ರಮಿಸಿದರು. ಹಲವರು ತಮ್ಮ ಫೇಸ್ಬುಕ್ನಲ್ಲಿ ದಸರಾ ಮೆರವಣಿಗೆಯ ಲೈವ್ ಮಾಡಿದರು.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ಸಾಗಿತು ಅಂಬಾರಿ ಮೆರವಣಿಗೆ, ಹೇಗಿತ್ತು ವೈಭವ? ಫೋಟೊ ನ್ಯೂಸ್