SHIVAMOGGA LIVE NEWS | 23 ಮಾರ್ಚ್ 2022
ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ವಾಹನ ಸವಾರರು ಪುನಃ ಆತಂಕಕ್ಕೀಡಾಗಿದ್ದಾರೆ. 137 ದಿನಗಳ ಬಳಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗುತ್ತಿದೆ.
ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಸತತ ಎರಡನೆ ದಿನ ಹೆಚ್ಚಳವಾಗಿದೆ. ಮಾರ್ಚ್ 22ರಂದು ಪೆಟ್ರೋಲ್ ಪ್ರತಿ ಲೀಟರ್’ಗೆ 84 ಪೈಸೆ ಏರಿಕೆಯಾಗಿತ್ತು. ಮಾರ್ಚ್ 23ರಂದು ಪ್ರತಿ ಲೀಟರ್ 84 ಪೈಸೆ ಏರಿಕೆಯಾಗಿದೆ. ಇವತ್ತು ಪ್ರತಿ ಲೀಟರ್ ಪೆಟ್ರೋಲ್ 103.76ಕ್ಕೆ ತಲುಪಿದೆ.
ಇನ್ನು, ಡಿಸೇಲ್ ದರವು ದುಬಾರಿಯಾಗುತ್ತಿದೆ. ಮಾ.22ರಂದು ಪ್ರತಿ ಲೀಟರ್ ದರ 77 ಪೈಸೆ ಏರಿಕೆಯಾಗಿತ್ತು. ಇವತ್ತು 79 ಪೈಸೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್ ಡಿಸೇಲ್ ದರ 87.86 ರೂ.ಗೆ ತಲುಪಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200