ಶಿವಮೊಗ್ಗ: ‘ಶತ್ರುಗಳ ಗುಹೆಯನ್ನೇ ಹೊಕ್ಕಿ ಹೊಡೆಯುವ ಶಕ್ತಿ ಭಾರತೀಯ ಸೇನೆಗಿದೆ’

ಶಿವಮೊಗ್ಗ: ‘ಆಪರೇಷನ್ ಸಿಂಧೂರ್’ (Operation Sindhur) ಕಾರ್ಯಾಚರಣೆಯು ಕೇವಲ ಸೇನಾ ಕ್ರಮವಲ್ಲ, ಅದು ಭಾರತದ ಬಲಿಷ್ಠ ಸಂಕಲ್ಪದ ಸಂಕೇತವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸದ ರಾಘವೇಂದ್ರ ಮಾತನಾಡಿದರು.

ಸಂಸದ ರಾಘವೇಂದ್ರ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್

ದಿಟ್ಟ ಪ್ರತ್ಯುತ್ತರ: ಪೆಹಲ್ಗಾಮ್‌ನಲ್ಲಿ ಅಮಾಯಕ ಭಾರತೀಯರ ಹತ್ಯೆ ಮಾಡಿದ ಉಗ್ರರಿಗೆ ಭಾರತ ನೀಡಿದ ದಿಟ್ಟ ಪ್ರತ್ಯುತ್ತರವೇ ಆಪರೇಷನ್ ಸಿಂಧೂರ್. ಈ ಬೃಹತ್ ಸೇನಾ ಕಾರ್ಯಾಚರಣೆ (Military operation) ನಡೆದು ಒಂದು ವರ್ಷ ಪೂರೈಸಿದೆ.

ಶತ್ರು ನೆಲೆಗಳ ಧ್ವಂಸ: 2025ರ ಮೇ 7ರಂದು ಭಾರತೀಯ ಸೇನಾಪಡೆಗಳು ಗಡಿ ದಾಟಿ ಪಾಕಿಸ್ತಾನದ ಒಳಗಿರುವ ಸುಮಾರು 9 ರಿಂದ 10 ಉಗ್ರಗಾಮಿ ನೆಲೆಗಳನ್ನು ಧ್ವಂಸಗೊಳಿಸಿವೆ. ಇದು ಭಾರತದ ರಕ್ಷಣಾ ನೀತಿಯಲ್ಲಿ (Defense policy) ಹೊಸ ಇತಿಹಾಸ ಬರೆದಿದೆ.

1011893703

ಜೀರೋ ಟಾಲರೆನ್ಸ್ ನೀತಿ: ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಕೇಂದ್ರ ಸರ್ಕಾರ ಜೀರೋ ಟಾಲರೆನ್ಸ್ (Zero tolerance policy) ನೀತಿಯನ್ನು ಅನುಸರಿಸುತ್ತಿದೆ. ಭಾರತವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಶತ್ರು ರಾಷ್ಟ್ರಗಳಿಗೆ ನೀಡಲಾಗಿದೆ.

ಆತ್ಮನಿರ್ಭರ ಶಕ್ತಿ: ಈ ಕಾರ್ಯಾಚರಣೆಯಲ್ಲಿ ಬಳಸಲಾದ ಕ್ಷಿಪಣಿಗಳು (Missile technology) ಆತ್ಮನಿರ್ಭರ ಭಾರತ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿವೆ. ಸ್ವದೇಶಿ ತಂತ್ರಜ್ಞಾನದ ಬಲವನ್ನು ಇದು ಜಗತ್ತಿಗೆ ತೋರಿಸಿಕೊಟ್ಟಿದೆ.

ನಮ್ಮ ದೇಶದ ಅಮಾಯಕ ನಾಗರಿಕರ ರಕ್ತಕ್ಕೆ ಉತ್ತರವಾಗಿ ಶತ್ರುಗಳು ಅಡಗಿದ್ದ ಗುಹೆಯನ್ನೇ ಹೊಕ್ಕಿ ಹೊಡೆಯುವ ಶಕ್ತಿ ಭಾರತೀಯ ಸೇನೆಗಿದೆ ಎಂದು ಆಪರೇಷನ್ ಸಿಂಧೂರ್ ಇತಿಹಾಸದಲ್ಲಿ ದಾಖಲಿಸಿದೆ. ಇದು ರಾಷ್ಟ್ರೀಯ ಭದ್ರತೆಯ (National security) ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಿರ್ಧಾರದ ಫಲವಾಗಿದೆ.

– ಬಿ.ವೈ.ರಾಘವೇಂದ್ರ, ಸಂಸದ
ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 7, 2026 at 11:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 7, 2026