SHIVAMOGGA LIVE NEWS | 1 APRIL 2024
ELECTION SPECIAL : ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು, ಅರಣ್ಯ ಸತ್ಯಾಗ್ರಹ ನಡೆಸಿದ್ದ ಕೆ.ಜಿ.ಒಡೆಯರ್ ಶಿವಮೊಗ್ಗ ಕ್ಷೇತ್ರದ ಮೊದಲ ಸಂಸದ. ಮಹಾತ್ಮ ಗಾಂಧೀಜಿ ಅನುಯಾಯಿಯಾಗಿದ್ದ ಕೆ.ಜಿ.ಒಡೆಯರ್ ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಧ್ಯ ಕರ್ನಾಟಕ ಭಾಗದಲ್ಲಿನ ಹಲವು ಚಳವಳಿಗಳಲ್ಲಿ ಭಾಗವಹಿಸಿದ್ದರು.
ಅರಣ್ಯ ಸತ್ಯಾಗ್ರಹದಲ್ಲಿ ಮುಂಚೂಣಿ
ಸ್ವಾತಂತ್ರ್ಯ ಚಳವಳಿ ವೇಳೆ ಅರಣ್ಯ ಸತ್ಯಾಗ್ರಹವು ಪ್ರಮುಖ ಹೋರಾಟವಾಗಿತ್ತು. ಸರ್ಕಾರಿ ಜಮೀನಿನಲ್ಲಿರುವ ಬೈನೆ ಮರಗಳನ್ನು ಕಡಿದು ಹೆಂಡ ಸರಬರಾಜು ಅಗದಂತೆ ತಡೆಯುವುದು ಇದರ ಪ್ರಮುಖ ಉದ್ದೇಶ. 1939ರಲ್ಲಿ ಸಾಗರ ಸಮೀಪದ ಸಣ್ಣಮನೆ ಹಳ್ಳದಲ್ಲಿ ಬಿ.ಕೆ.ಶಿವಪ್ಪ ಗೌಡ, ಬಿ.ವೆಂಕಟರಾವ್, ಕೆ.ಜಿ.ಒಡೆಯರ್ ಸೇರಿದಂತೆ ಹಲವರು ಕ್ಯಾಂಪ್ ಮಾಡಿ ಅರಣ್ಯ ಸತ್ಯಾಗ್ರಹದಲ್ಲಿ ತೊಡಗಿಸಿಕೊಂಡಿದ್ದರು. ಈ ಗುಂಪು ಆಗಾಗ ಪ್ರಭಾತ್ ಪೇರಿ (ಬೆಳಗೆ ಪಥಸಂಚಲನ) ನಡೆಸಿ ಜನ ಜಾಗೃತಿ ಮೂಡಿಸುತ್ತಿತ್ತು. ಸರ್ಕಾರಿ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು, ಹೆಂಡದ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸಿ ಬ್ರಿಟೀಷ್ ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿತ್ತು.
ಜೈಲಿಗೆ ಹೋಗಿದ್ದರು ಕೆ.ಜಿ.ಒಡೆಯರ್
ಮನ್ನಾಜಂಗಲ್‌ನಲ್ಲಿ ಬೈನೆ ಮರ ಕಡಿದ ಪ್ರಕರಣದಲ್ಲಿ ಬ್ರಿಟೀಷ್ ಪೊಲೀಸರು 1939ರ ಅಕ್ಟೋಬರ್ 10ರಂದು ಕೆ.ಜಿ.ಒಡೆಯರ್, ಕಲ್ಲಕೊಪ್ಪ ಸೇರಿದಂತೆ 16 ಹೋರಾಟಗಾರರನ್ನು ಬಂಧಿಸಿದ್ದರು. ತಪ್ಪೊಪ್ಪಿಗೆ ಪತ್ರ ಬರೆದುಕೊಡುವಂತೆ ಬ್ರಿಟೀಷ್ ಪೊಲೀಸರು ಹಿಂಸೆ ನೀಡಿದ್ದರು. ಕೊನೆಗೆ ನ್ಯಾಯಾಲಯದಲ್ಲಿ ಕೆ.ಜಿ.ಒಡೆಯರ್ ಮತ್ತಿತರರನ್ನ ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿತ್ತು.
ಎರಡು ಬಾರಿ ಸಂಸದರಾಗಿದ್ದರು
ಕೆ.ಜಿ.ಒಡೆಯರ್ ಅವರು ಶಿವಮೊಗ್ಗದಿಂದ ಎರಡು ಬಾರಿ ಲೋಕಸಭೆ ಪ್ರವೇಶಿಸಿದ್ದರು. 1952ರಲ್ಲಿ ಮೊದಲ ಬಾರಿ ಸಂಸದರಾಗಿದ್ದರು. 1957ರಲ್ಲಿ ಎರಡನೇ ಲೋಕಸಭೆಗು ಶಿವಮೊಗ್ಗದ ಸಂಸದರಾಗಿದ್ದರು. ಸಂಸತ್ತಿನ ವಿವಿಧ ಕಮಿಟಿಗಳಿಗೆ ಸದಸ್ಯರಾಗಿದ್ದರು.
ಇದನ್ನೂ ಓದಿ – ‘ಹಸೆ ಚಿತ್ತಾರ’ ಪುಸ್ತಕ ಬಿಡುಗಡೆ, ಯಾರೆಲ್ಲ ಭಾಗವಹಿಸಿದ್ದರು, ಏನೇನೆಲ್ಲ ಮಾತನಾಡಿದರು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200