ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 1 ಮೇ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಹ್ಯಾದ್ರಿ ಕಾಲೇಜಿನಲ್ಲಿ ಮೇ.23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಪೂರ್ವಭಾವಿ ಸಿದ್ಧತೆ ಬಗ್ಗೆ ಅಭ್ಯರ್ಥಿಗಳು ಮತ್ತು ಅವರ ಏಜೆಂಟರುಗಳ ಸಭೆ ನಡೆಸಲಾಯಿತು.
ಬಿ.ಹೆಚ್.ರಸ್ತೆಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ನೆಲ ಮಹಡಿಯಲ್ಲಿ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ಒಂದನೇ ಮಹಡಿಯಲ್ಲಿ ಶಿವಮೊಗ್ಗ ಗ್ರಾಮಾಂತರ, ಬೈಂದೂರು, ಸಾಗರ, ಶಿಕಾರಿಪುರ, ಸೊರಬ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 16 ಟೇಬಲ್’ಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಮತ ಎಣಿಕೆಗೆ 14 ಟೇಬಲ್’ಗಳು, ಸಹಾಯಕ ಚುನಾವಣಾಧಿಕಾರಿ ಹಾಗೂ ಟ್ಯಾಬುಲೇಷನ್’ಗೆ 2 ಟೇಬಲ್ ಇರುತ್ತದೆ. ಒಟ್ಟು 8 ಕ್ಷೇತ್ರಕ್ಕೆ 128 ಟೇಬಲ್ ಇರುತ್ತದೆ.
ಚುನಾವಣಾಧಿಕಾರಿಗಳಿಗೆ 1 ಟೇಬಲ್ ಇದ್ದು, ಒಟ್ಟು 129 ಟೇಬಲ್’ಗಳಿದ್ದು ಮತ ಎಣಿಕೆ ಏಜೆಂಟರನ್ನು ನೇಮಿಸಲು ನಮೂನೆ- 18ರಲ್ಲಿ ಅರ್ಜಿ ನೀಡಲಾಗಿದೆ. ಅರ್ಜಿಗೆ ತಮ್ಮ ಸ್ಟಾಂಪ್ ಸೈಜ್ ಚಿತ್ರ ಅಂಟಿಸಿ ಇನ್ನೆರಡು ಹೆಚ್ಚುವರಿ ಭಾವಚಿತ್ರಗಳೊಂದಿಗೆ ಅಭ್ಯರ್ಥಿಯ ಸಹಿ ಪಡೆದು
ಚುನಾವಣಾ ಏಜೆಂಟರು ಸಹಿ ಮಾಡಿ ಮೇ.15ರೊಳಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಸಭೆಯಲ್ಲಿ ವಿವಿಧ ಪಕ್ಷಗಳ ಏಜೆಂಟರುಗಳು ಉಪಸ್ಥಿತರಿದ್ದರು.