ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ, ಇತ್ತೀಚೆಗೆ ಪಕ್ಷ ಸೇರಿದವರಿಗೆ ಟಿಕೆಟ್‌, ಮೇ 21ರ ಬಳಿಕ ನಿರ್ಧಾರ ಪ್ರಕಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 MAY 2024

SHIMOGA : ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಲ್ಲಿ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಿಸಲಾಗಿದೆ. ಆಕಾಂಕ್ಷಿಗಳ (Aspirant) ಅಭಿಪ್ರಾಯ ಕೇಳದೆ ಅಭ್ಯರ್ಥಿ ಘೋಷಿಸಲಾಗಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸೌಜನ್ಯಕ್ಕು ಆಹ್ವಾನಿಸಿಲ್ಲ ಎಂದು ಬಿಜೆಪಿ ಕಾನೂನು ಪ್ರಕೋಷ್ಟದ ಸಹ ಸಂಚಾಲಕ ಪ್ರವೀಣ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವೀಣ್‌, ಪದವೀಧರ ಕ್ಷೇತ್ರಕ್ಕೆ ಗಿರೀಶ್‌ ಪಟೇಲ್‌, ಎಸ್.ದತ್ತಾತ್ರಿ, ರಘಪತಿ ಭಟ್‌ ಮತ್ತು ನಾನು ಆಕಾಂಕ್ಷಿಗಳಾಗಿದ್ದೆವು. ಇದಕ್ಕಾಗಿ ಪದವೀಧರರ ನೋಂದಣಿ ಕಾರ್ಯ ನಡೆಸಿದ್ದೇವೆ. ಆದರೆ ತಮ್ಮ ಅಭಿಪ್ರಾಯ ಕೇಳದೆ, ಈಚೆಗಷ್ಟೆ ಬಿಜೆಪಿ ಸೇರಿದವರಿಗೆ ಟಿಕೆಟ್‌ ನೀಡಲಾಗಿದೆ. ಇನ್ನೊಂದೆಡೆ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕಡು ಭ್ರಷ್ಟ ಎಂದು ಆರೋಪಿಸಿದರು.

ಇದನ್ನೂ ಓದಿ – ಪ್ಲಾಸ್ಟಿಕ್‌ ನುಂಗಿ ನಿತ್ರಾಣಗೊಂಡಿದ್ದ ಹಾವು, ಮಾರುದ್ದದ್ದ ಪ್ಲಾಸ್ಟಿಕ್‌ ಹೊರತೆಗೆದ ಉರಗ ರಕ್ಷಕ

ಮೇ 21ರ ನಂತರ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.‌ದೇವೇಂದ್ರಪ್ಪ, ಮಹೇಂದ್ರ ಕುಮಾರ್‌, ವಾಗೀಶ್‌ ಉಪಸ್ಥಿತರಿದ್ದರು.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment