ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 APRIL 2024
SAGARA : ಮೊದಲ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಬಿ.ವೈ.ರಾಘವೇಂದ್ರಗು ಸ್ವಸಾಮರ್ಥ್ಯ ಇರಲಿಲ್ಲ. ನಮ್ಮಪ್ಪ ಸೈಕಲ್ ಕೊಟ್ಟಿದ್ದಾರೆ ಎಂದುಕೊಂಡೇ ಪ್ರಚಾರ ನಡೆಸಿದ್ದರು ಎಂದು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಕುರಿತು ಬಿಜೆಪಿ ನಾಯಕ ಟೀಕೆಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಸಮರ್ಥರಿದ್ದಾರೆ. ಮತದಾರರು ಅವರಿಗೆ ಒಂದು ಅವಕಾಶ ನೀಡಬೇಕು. ಮೊದಲ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಬಿ.ವೈ.ರಾಘವೇಂದ್ರ ಅವರಿಗೆ ಸ್ವಸಾಮರ್ಥ್ಯವಿರಲಿಲ್ಲ. ಭಾಗ್ಯಲಕ್ಷ್ಮಿ ಯೋಜನೆ ಅಡಿ ನಮ್ಮಪ್ಪ ಮಕ್ಕಳಿಗೆ ಸೈಕಲ್ ಕೊಟ್ಟಿದ್ದಾರೆ ಎಂದುಕೊಂಡೇ ಪ್ರಚಾರ ಮಾಡಿದ್ದರು. ಈ ಹಿಂದೆ ಬಂಗಾರಪ್ಪ ಅವರು ಜಾರಿಗೆ ತಂದಿದ್ದ ಯೋಜನೆಗಳನ್ನು ಗೀತಾ ಶಿವರಾಜ್ ಕುಮಾರ್ ಅವರಿಗೆ ನೆರವಾಗಲಿವೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಇನ್ನು, ಈಶ್ವರಪ್ಪ ಅವರು ಲೋಕಸಭೆ ಚುನಾವಣ ಕಣದಲ್ಲಿ ಇರುತ್ತಾರೋ ಇಲ್ಲವೋ ಅನ್ನುವುದು ಏ.19ರ ನಂತರ ಗೊತ್ತಾಗುತ್ತದೆ. ಅಲ್ಲಿಯ ತನಕ ಈಶ್ವರಪ್ಪ ಅವರ ಕುರಿತು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಇದನ್ನೂ ಓದಿ – ಹೋಳಿಗೆ ಗೌರಮ್ಮ ಇನ್ನಿಲ್ಲ, ಶಿವಮೊಗ್ಗದಿಂದ ವಿದೇಶಕ್ಕೆ ಹೋಗುತ್ತಿತ್ತು ಇವರ ಹೋಳಿಗೆ