ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 27 ಡಿಸೆಂಬರ್ 2019
ಪೌರತ್ವ ಕಾಯ್ದೆ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ, ಹೊಸ ವರ್ಷದ ಮೊದಲ ದಿನದಿಂದಲೇ ಜಾಗೃತಿ ಅಭಿಯಾನ ಆಯೋಜಿಸಲು ಬಿಜೆಪಿ ನಿರ್ಧರಿಸಿದೆ. ಮನೆ ಮನೆಗೆ ತೆರಳಿ ಕಾಯ್ದೆ ಕುರಿತು ತಿಳಿವಳಿಕೆ ಮೂಡಿಸಲು ಯೋಜಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಪ್ರತಿ ಬೂತ್ ಮಟ್ಟದಲ್ಲೂ ಜನ ಜಾಗೃತಿ ಸಭೆಗಳನ್ನು ನಡೆಸಲಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ತಿಳಿವಳಿಕೆ ಮೂಡಿಸಬೇಕಿದೆ. ಜನವರಿ 1 ರಿಂದ 15ರವರೆಗೆ ನಿರಂತರವಾಗಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಏನೆಲ್ಲ ಮಾಡಲು ಬಿಜೆಪಿ ಯೋಜಿಸಿದೆ?
ಜನವರಿ 1 ರಿಂದ 5ರವರೆಗೆ ಮನೆ ಮನೆ ಸಂಪರ್ಕ ಅಭಿಯಾನ ನಡೆಯಲಿದೆ. ಜನವರಿ 6 ರಿಂದ 8 ರವರೆಗೆ ಚಾಯ್ ಪೇ ಚರ್ಚೆಗಳು ನಡೆಯಲಿವೆ. ಜನವರಿ 9 ಮತ್ತು 10ರಂದು ಸಂವಾದ ಮತ್ತು ಭಾರತ ಮಾತಾ ಪೂಜನ್ ಕಾರ್ಯಕ್ರಮಗಳು ನಡೆಯಲಿದೆ. ಜನವರಿ 11 ಮತ್ತು 12ರಂದು ಪತ್ರ ಬರಹ, ಸಹಿ ಸಂಗ್ರಹ ಮತ್ತು ಸಭೆಗಳು ನಡೆಯಲಿದೆ. ಜನವರಿ 13 ರಿಂದ 15ರವರೆಗೆ ತಾಲೂಕು, ಮಂಡಲ ಮತ್ತು ಬೂತ್ ಮಟ್ಟದಲ್ಲಿ ರಾಲಿ, ಸಾರ್ವಜನಿಕ ಸಭೆಗಳು ನಡೆಯಲಿದೆ.
ಜವಾಬ್ದಾರಿ ಹಂಚಿದ ಪಕ್ಷ
ಕಾಯ್ದೆ ಕುರಿತು ಜನ ಜಾಗೃತಿಗಾಗಿ ಜಿಲ್ಲಾ ತಂಡವನ್ನು ರಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಾಘವೇಂದ್ರ, ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಪ್ರಮುಖರು ಇರಲಿದ್ದಾರೆ. ಇನ್ನು, ಜಿಲ್ಲಾ ಕಾರ್ಯನಿರ್ವಹಣ ತಂಡವನ್ನು ರಚಿಸಲಾಗಿದೆ. ಪ್ರಸನ್ನ ಕೆರೆಕೈ ಸೇರಿದಂತೆ ಹಲವರು ಈ ತಂಡದ್ದಲಿ ಇರಲಿದ್ದಾರೆ.
ಸಂಪರ್ಕ ವಿಭಾಗಕ್ಕೆ ಆರ್.ಕೆ.ಸಿದ್ದರಾಮಣ್ಣ, ಸಂವಾದ ವಿಭಾಗಕ್ಕೆ ಶಾಸಕ ಹರತಾಳು ಹಾಲಪ್ಪ, ಸಾರ್ವಜನಿಕ ಸಭೆ ಮತ್ತು ರಾಲಿಯ ಜವಾಬ್ದಾರಿಯನ್ನು ಶಾಸಕರಾದ ಆಯನೂರು ಮಂಜುನಾಥ್, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ ಅವರಿಗೆ ವಹಿಸಲಾಗಿದೆ. ಸಹಿ ಸಂಗ್ರಹ ಅಭಿಯಾನದ ಜವಾಬ್ದಾರಿಯನ್ನು ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಸಾಮಾಜಿಕ ಜಾಲತಾಣದ ಜವಾಬ್ದಾರಿ ಶ್ರೀನಾಥ್ ನಗರಗದ್ದೆ, ಮಾಧ್ಯಮ ಜವಾಬ್ದಾರಿ ಬಿ.ಆರ್.ಮಧುಸೂದನ್, ವಿಶೇಷ ಚಟುವಟಿಕೆ ದತ್ತಾತ್ರಿ ಅವರಿಗೆ ವಹಿಸಲಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಸಾಗರ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಪಾಲಿಕೆ ಉಪಮೇಯರ್ ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]