ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ, ಎಲ್ಲೆಲ್ಲಿ ಹೇಗಿತ್ತು ಗೊತ್ತಾ ಸಂಭ್ರಮಾಚರಣೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಜುಲೈ 2019

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ವಿಶ್ವಾಸಮತದಲ್ಲಿ ಸೋಲನುಭವಿಸಿದೆ. ಇದರ ಬೆನ್ನಿಗೆ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವ ಸಂಭ್ರಮ ಮೊಳಕೆಯೊಡೆದಿದೆ. ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಎಲ್ಲೆಲ್ಲಿ ಹೇಗಿತ್ತು ಸಂಭ್ರಮಾಚರಣೆ

ಬಿಜೆಪಿ ಕಚೇರಿ

ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಬಿಜೆಪಿ ಮುಖಂಡರ ಪರವಾಗಿ ಘೋಷಣೆ ಕೂಗಿದರು.

67342507 888992038128884 1856979430262439936 n.jpg? nc cat=100& nc oc=AQkbsrp1SHTJL6nfcCaAczt ptm9vZ5wD316HFNFA2OTn66MpDMW8v49Si2Me6YJHlI& nc ht=scontent.fblr1 3

ವಿನೋಬನಗರದಲ್ಲಿ ಯಡಿಯೂರಪ್ಪ ಮನೆ

ಯಡಿಯೂರಪ್ಪ ಅವರ ವಿನೋಬನಗರದ ನಿವಾಸದಲ್ಲೂ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿದರು.

67535025 888991914795563 1254943380366950400 n.jpg? nc cat=102& nc oc=AQlVP8DeSscJ125RKnm4DdpKIvSf7VBQKba2z9WtD0p9C7LW ao9sPPMKr 2pWakbnM& nc ht=scontent.fblr1 3

ಯಡಿಯೂರಪ್ಪ ಪರವಾಗಿ ಘೋಷಣೆ ಕೂಗಿದರು. ಯಡಿಯೂರಪ್ಪ ಪುತ್ರ ಅರುಣಾದೇವಿ, ಅವರ ಪತಿ ಉದಯ್ ಕುಮಾರ್ ಅವರು ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ಅವರ ಅಭಿಮಾನಿಗಳಿಗೆ ಸಿಹಿ ಹಂಚಿದರು.

67084120 888991934795561 4045996275303186432 n.jpg? nc cat=109& nc oc=AQlq32LW4JY1z8jiiUl9yp EFnxE oOejxSfDpsDm542nLbdmddEw9JT753VSXp NIQ& nc ht=scontent.fblr1 3

ಮಲ್ಲೇಶ್ವರ ನಗರದ ಈಶ್ವರಪ್ಪ ಮನೆ

ಈಶ್ವರಪ್ಪ ಅವರ ಮನೆಯಲ್ಲೂ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

67238973 888992164795538 7259609665095335936 n.jpg? nc cat=107& nc oc=AQnPH4 DwkEIAwDgAXuMd1ZSQdSY9K rqZYR6jHCLDX cBz8YRN1hCmfGXsxHkO8Gs& nc ht=scontent.fblr1 3

ಇಲ್ಲಿಯೂ ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು. ಈಶ್ವರಪ್ಪ ಅವರ ಕುಟುಂಬದವರು, ಮೊಮ್ಮಕ್ಕಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment