ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 FEBRUARY 2024
SHIMOGA : ಸರ್ಕಾರ ಪ್ರತಿ ಲೀಟರ್ ಹಾಲಿಗೆ ರೈತರಿಗೆ ನೀಡುತ್ತಿದ್ದ ಸಹಾಯಧನ ಕಡಿತಗೊಳಿಸಿದೆ. ಇತ್ತ ಗ್ರಾಹಕರಿಗೆ ಹಾಲಿನ ದರವನ್ನೂ ಹೆಚ್ಚಳ ಮಾಡಲಾಗಿದೆ. ಪಶು ಆಹಾರದ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಗೋವುಗಳನ್ನು ನಿಲ್ಲಿಸಿಕೊಂಡು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯಾರೆಲ್ಲ, ಏನೇನು ಹೇಳಿದರು?
ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ : ಸರ್ಕಾರದ ಬಳಿ ಹಣ ಇಲ್ಲ. ಹಾಗಾಗಿ ರೈತರಿಗೆ 716 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ. ಈ ಮೂಲಕ ರೈತರು ಮತ್ತು ಗೋವಿಗೆ ವಂಚಿಸುತ್ತಿದ್ದಾರೆ. ಇವುಗಳ ಶಾಪದಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಸೋಲುಂಡು, ಸರ್ಕಾರ ಪತನವಾಗಲಿದೆ.
ಟಿ.ಡಿ.ಮೇಘರಾಜ್, ಬಿಜೆಪಿ ಜಿಲ್ಲಾಧ್ಯಕ್ಷ : ಹಾಲಿನ ದರ ಹೆಚ್ಚಳ ಮಾಡುವಾಗ ಹೆಚ್ಚುವರಿ ದರವನ್ನು ರೈತರಿಗೆ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ರೈತರಿಗೆ ಕೊಡುತ್ತಿರುವ ಹಾಲಿನ ದರ ಕಡಿತ ಮಾಡಿದ್ದಾರೆ. ಇದೆ ರೀತಿ ಮುಂದುವರಿದರೆ ಶಿಮುಲ್ಗೆ ಮುತ್ತಿಗೆ ಹಾಕಲಾಗುತ್ತದೆ.
ಚನ್ನಬಸಪ್ಪ, ಶಾಸಕ : ಹಿಂದಿನ ಬಿಜೆಪಿ ಸರ್ಕಾರ ರೈತರ ಮಕ್ಕಳ ಶಿಕ್ಷಣಕ್ಕೆ ವಿಧ್ಯಾನಿಧಿ ಘೋಷಿಸಿತ್ತು. ಅದನ್ನು ಈ ಸರ್ಕಾರ ಕಸಿದುಕೊಂಡಿದೆ. ಈವರೆಗೂ ಬರ ಪರಿಹಾರ ನೀಡಿಲ್ಲ. ಆದರ ಬದಲು ರೈತರಿಗೆ 2 ಸಾವಿರ ರೂ. ಭಿಕ್ಷೆ ನೀಡಿದೆ. ಈವರೆಗೂ ರೈತರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಈಗ ಗ್ಯಾರಂಟಿಗು ಹಣ ಇಲ್ಲದ ಸ್ಥಿತಿಗೆ ಸರ್ಕಾರ ತಲುಪಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸರಿಂದ ಮುಂದುವರೆದ ವಿಶೇಷ ಗಸ್ತು, ಹಲವರ ವಿಚಾರಣೆ, 52 ಲಘು ಕೇಸ್ ದಾಖಲು
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ರಾಜ್ಯ ಪ್ರಕೋಷ್ಠಗಳ ಸಂಚಾಲಕ ದತ್ತಾತ್ರಿ, ವಿನ್ಸೆಂಟ್ ರೋಡ್ರಿಗಸ್ ಸೇರಿದಂತೆ ಹಲವರು ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422