ಕುಂತಲ್ಲಿ, ನಿಂತಲ್ಲಿ ಹಣ ತಂದೆ ಅಂತಿದಾರೆ, ಪಾದಯಾತ್ರೆ ಮಾಡಿ ಸುಮ್ಮನೆ ಕೂತರೆ ಆಗಲ್ಲ, ಮಧು ವಿರುದ್ಧ ರಾಘವೇಂದ್ರ ಟಾಂಗ್

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | 23 ಮಾರ್ಚ್ 2019

ಪಾದಯಾತ್ರೆ ಮಾಡಿದಾಕ್ಷಣ ಜವಾಬ್ದಾರಿ ಮುಗಿಯುವುದಿಲ್ಲ. ಪಟ್ಟು ಹಿಡಿದು ಕೆಲಸ ಮಾಡಿಸಬೇಕು ಅಂತಾ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಶಿವಮೊಗ್ಗ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಟೀಕಿಸಿದ್ದಾರೆ.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ, ಅಭ್ಯರ್ಥಿಯಾದ ಬಳಿಕ ಕುಂತಲ್ಲಿ, ನಿಂತಲ್ಲಿ ನೀರಾವರಿ ಯೋಜನೆಗೆ ಹಣ ತಂದೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಪಾದಯಾತ್ರೆ ಮಾಡಿ ಸುಮ್ಮನೆ ಕುಳಿತರೆ ಸಾಲದು ಅಂದರು.‌

ಸರ್ಕಾರದ ಪತ್ರದಲ್ಲೇ‌ ನಮ್ಮನ್ನು ಹೊಗಳಿದ್ದಾರೆ

ಜಿಲ್ಲೆಯ ಏತ ನೀರಾವರಿ ಯೋಜನೆ ಕುರಿತು ಕೇಂದ್ರದ ನೀರಾವರಿ ಸಚಿವೆ ಉಮಾ ಭಾರತಿ ಅವರಿಗೆ ಮನವಿ ಸಲ್ಲಿಸಿದ್ದೆವು. ಕೇಂದ್ರದ ತಂಡವೊಂದು ಶಿವಮೊಗ್ಗಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತ್ತು. ಇದೇ ವಿಚಾರ ಸಂಬಂಧ ಸಿದ್ದರಾಮಯ್ಯ ಅವರ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನವನ್ನೂ ಮಾಡಿದೆವು‌. ಆದರೆ ಅವರ ಸರ್ಕಾರ ಕುಂಭಕರ್ಣ ನಿದ್ರೆಯಿಂದ ಏಳಲಿಲ್ಲ. ನಂತರ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದೆವು ಎಂದರು.

ಸರ್ಕಾರದ ಪತ್ರದಲ್ಲಿ ಶಿವಮೊಗ್ಗದ ಸಂಸದರು, ಶಿಕಾರಿಪುರದ ಶಾಸಕರು ಮನವಿ ಮೇರೆಗೆ ಎಂದು ಪ್ರಸ್ತಾಪಿಸಲಾಗಿದೆ ಅಂತಾ ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಕರೆ ಮಾಡಿ | 9964634494

ಈ ಮೇಲ್ | shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment