ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗಣ್ಯಾತಿಗಣ್ಯರೇ ಈ ವೇಳೆ ಉಪಸ್ಥಿತರಿದ್ದರು. ಈ ವೇಳೆ ನಡೆದ ಕೆಲವು ಪ್ರಮುಖ ಸಂಗತಿಗಳು ಗಮನ ಸೆಳೆದವು.
ಭದ್ರಾವತಿಯಲ್ಲಿ ಸಿಎಂ ಕಾರು ಚೆಕ್ಕಿಂಗ್
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗ್ಗೆ ಹಾಸನದಲ್ಲಿ ಪ್ರಚಾರ ನಡೆಸಿ, ಶಿವಮೊಗ್ಗಕ್ಕೆ ಬರುತ್ತಿದ್ದರು. ಭದ್ರಾವತಿ ಕಾರೇಹಳ್ಳಿ ಚೆಕ್’ಪೋಸ್ಟ್’ನಲ್ಲಿ ಸಿಎಂ ಕಾರು ತಡೆದ ಚುನಾವಣಾ ಸಿಬ್ಬಂದಿ, ಅವರ ಕಾರು ತಪಾಸಣೆ ನಡೆಸಿದರು.
ಡಿಕೆಶಿ ಹೆಲಿಕಾಪ್ಟರ್ ಚೆಕ್ ಮಾಡಿದ ಅಧಿಕಾರಿಗಳು
ಸಚಿವ ಡಿ.ಕೆ.ಶಿವಕುಮಾರ್ ಅವರು, ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು. ಅವರು ಬಂದಿಳಿಯುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು, ರಿಯಾಕ್ಷನ್ ಕೇಳಿದರು. ಮಾಧ್ಯಮದವರೊಂದಿಗೆ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದಂತೆ, ಹೆಲಿಪ್ಯಾಡ್’ನಲ್ಲಿ ಚುನಾವಣಾಧಿಕಾರಿಗಳು, ಅವರ ಹೆಲಿಕಾಪ್ಟರನ್ನು ತಪಾಸಣೆಗೆ ಒಳಪಡಿಸಿದರು.
ಮುಖಕ್ಕೆ ಟವಲ್ ಮುಚ್ಚಿಕೊಂಡ ಡಿಕೆಶಿ..!
ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಮೆರವಣಿಗೆ ನಡೆಯಿತು. ಗಾಂಧಿ ಬಜಾರ್’ನಿಂದ ಶಿವಪ್ಪನಾಯಕ ಪ್ರತಿಮೆ ಬಳಿ ಬರುತ್ತಿದ್ದಂತೆ, ಅಭಿಮಾನಿಗಳು, ಡಿ.ಕೆ.ಶಿವಕುಮಾರ್, ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ ಅವರ ಮೇಲೆ ಹೂವು ಎರಚಲು ಶುರು ಮಾಡಿದರು. ಹೂವು ಬೀಳುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಅವರು ಟವಲ್’ನಿಂದ ತಲೆ ಮುಚ್ಚಿಕೊಂಡರು. ಇದರಿಂದ ಅಭಿಮಾನಿಗಳು ಕೆಲಕಾಲ ಗೊಂದಲಕ್ಕೀಡಾದರು. ಮೈಕ್ ಹಿಡಿದುಕೊಂಡ ಮಧು ಬಂಗಾರಪ್ಪ ಹೂವು ಹಾಕಬೇಡಿ, ಡಿ.ಕೆ.ಶಿವಕುಮಾರ್ ಅವರಿಗೆ ಅಲರ್ಜಿ ಆಗುತ್ತೆ ಅಂದರು.
ಎಲ್ಲರೂ ಮುಂದೆ, ಸಿಎಂ ಎಲ್ಲರ ಹಿಂದೆ..!
ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಅಭ್ಯರ್ಥಿ ಮಧು ಬಂಗಾರಪ್ಪ ಸೇರಿದಂತೆ ಬಹುತೇಕ ಕಾಂಗ್ರೆಸ್, ಜೆಡಿಎಸ್ ಮುಖಂಡರು ಎರಡು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಈ ವಾಹನದಲ್ಲಿ ಸಿಎಂ ಕಾಣಿಸದಿದ್ದರಿಂದ, ಬಹುತೇಕರು ಅವರು ಬಂದೇ ಇಲ್ಲ ಅಂದುಕೊಂಡರು. ಆದರೆ ಹಿಂದೆ ಇದ್ದ ಜೆಡಿಎಸ್ ಪಕ್ಷದ ಸ್ಪೆಷಲ್ ಬಸ್’ನಲ್ಲಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎಲ್ಲರತ್ತ ಕೈ ಬೀಸುತ್ತಾ ಬರುತ್ತಿದ್ದರು. ಇದನ್ನು ಕಂಡು ಕಾರ್ಯಕರ್ತರು ಚಕಿತರಾದರು. ಕೊನೆಗೆ ಗೋಪಿ ಸರ್ಕಲ್’ನಲ್ಲಿ, ಎಲ್ಲ ನಾಯಕರು ತೆರೆದ ವಾಹನ ಇಳಿದು, ಸ್ಪೆಷಲ್ ಬಸ್ ಹತ್ತಿ, ಭಾಷಣ ಮಾಡಿದರು.
ಸಿಎಂಗೆ ಮಜ್ಜಿಗೆ ಪ್ಯಾಕೆಟ್ ಎಸೆದ ಕಾರ್ಯಕರ್ತ
ಗೋಪಿ ಸರ್ಕಲ್’ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾಷಣ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಕಾರ್ಯಕರ್ತರೊಬ್ಬರು, ಪಕ್ಕದಲ್ಲೇ ಇದ್ದ ನಂದಿನಿ ಹಾಲು ಪಾರ್ಲರ್’ನಿಂದ ಮಜ್ಜಿಗೆ ಖರೀದಿಸಿ ತಂದು, ಬಸ್ ಮೇಲಿದ್ದ ಸಿಎಂ ಅವರತ್ತ ತೂರಿದರು.
ತಲೆ ಸುತ್ತು ಬಂದು ರಸ್ತೆಯಲ್ಲೇ ಬಿದ್ದ ನಾಯಕಿ
ನಾಮಪತ್ರ ಸಲ್ಲಿಕೆ ಮುಗಿದ ಬಳಿಕ ಮುಖ್ಯಮಂತ್ರಿ, ಸಚಿವರು, ಶಾಸಕರು ಮುಖಂಡರು ಹಿಂತಿರುಗಿದರು. ಈ ವೇಳೆ ರಸ್ತೆ ದಾಟುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕಿ ಬಲ್ಕಿಷ್ ಬಾನು, ದಿಢೀರ್ ಕುಸಿದು ಬಿದ್ದರು. ಇದರಿಂದ ಗಾಬರಿಯಾದ ಕಾರ್ಯಕರ್ತರು ರಸ್ತೆ ವಿಭಜಕದ ಮೇಲೆ ಅವರನ್ನು ಕೂರಿಸಿ, ಗಾಳಿ ಬೀಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]