SHIVAMOGGA LIVE NEWS, 16 JANUARY 2025
ಶಿವಮೊಗ್ಗ : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದನಗಳ (Cow) ಕೆಚ್ಚಲು ಕತ್ತರಿಸಿದ ಪ್ರಕರಣದ ವಿರುದ್ಧ ಮಾಜಿ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಸಿಡಿಮಿಡಿಗೊಂಡರು.
ಈಶ್ವರಪ್ಪ ಏನೆಲ್ಲ ಹೇಳಿದರು?
ರಾಜ್ಯ ಸರ್ಕಾರ ಹಿಂದುಗಳನ್ನು ಅಲಕ್ಷ್ಯ ಮಾಡುತ್ತಿದೆ. ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ. ಬೆಂಗಳೂರು ಚಾಮರಾಜಪೇಟೆಯ ಕರ್ಣ ಎಂಬುವವರಿಗೆ ಸೇರಿದ ಮೂರು ಗೋವುಗಳ ಕೆಚ್ಚಲು ಕತ್ತರಿಸಲಾಗಿದೆ. ಇದು ರಾಕ್ಷಸಿ ಕೃತ್ಯ. ನಸ್ರು ಎಂಬಾತ ಕುಡಿದ ಅಮಲಿನಲ್ಲಿ ಕೆಚ್ಚಲು ಕತ್ತರಿಸಿದ್ದಾನೆ ಎಂದು ಆರೋಪಿಸಿ ಆತನನ್ನು ಬಂಧಿಸಲಾಗಿದೆ. ಆತ ಹುಚ್ಚ, ಕುಡುಕ ಎಂದು ಪೊಲೀಸರು ಹೇಳಿದ್ದಾರೆ. ಹಾಗಿದ್ದ ಮೇಲೆ ಮೂರು ಹಸುಗಳ ಕೆಚ್ಚಲು ಕತ್ತರಿಸುವ ಬುದ್ದಿ ಎಲ್ಲಿಂದ ಬಂತು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ಬಸ್ ಹತ್ತಿ ಆಧಾರ್ ಕಾರ್ಡ್ ತೆಗೆಯಲು ಮುಂದಾದ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?
ಪೊಲೀಸರು ಸ್ವಾಭಿಮಾನ ಬಿಟ್ಟಿದ್ದು, ಕೆಚ್ಚಲು ಕತ್ತರಿಸಿದ ರಾಕ್ಷಸರ ಪರವಾಗಿ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಹೇಳಿದಂತೆ ಆರೋಪಿ ಕುರಿತು ಹೇಳಿಕೆ ನೀಡಿದ್ದಾರೆ. ಬಡ್ತಿಗಾಗಿ ಪೊಲೀಸರು ಇಂತಹ ಹೇಳಿಕೆ ನೀಡಿದ ಪೊಲೀಸರು ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ಕರ್ಮ ಅನುಭವಿಸುತ್ತಾರೆ. ಕೆಚ್ಚಲು ಕತ್ತರಿಸಿದವನ ಪರ ಮಾತನಾಡಿದ್ದೇನೆ ಎಂದು ಪೊಲೀಸ್ ಅಧಿಕಾರಿಗಳು ತಮ್ಮ ತಾಯಿ, ಹೆಂಡತಿ, ಮಗಳ ಬಳಿ ಹೇಳಲಿ. ಅವರ ಪ್ರತಿಕ್ರಿಯೆ ಗೊತ್ತಾಗುತ್ತದೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಂಧಿತ ನಸ್ರು ಹಿಂದೆ ದೊಡ್ಡ ಗುಂಪು ಇದೆ ಎಂಬ ಅನುಮಾನವಿದೆ. ಸೂಕ್ತ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಮುಸ್ಲಿಮರನ್ನು ಮಾತ್ರ ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ. ಹಿಂದೂಗಳು ಮತ ನೀಡಿದ್ದಾರೆ ಎಂಬುದನ್ನು ಮರೆತಿದ್ದಾರೆ. ಸರ್ಕಾರಕ್ಕೆ ಗೋ ಮಾತೆಯ ಶಾಪ ತಟ್ಟಲಿದೆ ಎಂದು ಈಶ್ವರಪ್ಪ ತಿಳಿಸಿದರು.
ಈ.ವಿಶ್ವಾಸ್, ಮಹಾಲಿಂಗಶಾಸ್ತ್ರಿ, ಜಾಧವ್, ಬಾಲು, ಶಿವಾಜಿ, ರಾಜು, ಶಂಕರ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದಾರೆ.