ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 MAY 2024
SHIMOGA : ಚುನಾವಣೆ ಹೊತ್ತಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ ಸಂಬಂಧ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ತಕ್ಷಣ ಬಂಧಿಸಿ ವಿಚಾರಣೆ ನಡೆಸಬೇಕು. ಆಗ ಸುಳ್ಳು ಸುದ್ದಿ ಹಿಂದೆ ಯಾರೆಲ್ಲ ಇದ್ದಾರೆ ಅನ್ನುವುದು ಬೆಳಕಿಗೆ ಬರಲಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಚುನಾವಣ ಅಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿದ್ದೇನೆ. ಮೇ 15ರವರೆಗೆ ಗಡುವು ನೀಡುತ್ತೇನೆ. ಒಂದು ವೇಳೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಎಚ್ಚರಿಸಿದರು.
ಬೆನ್ನಿಗೆ ಚೂರಿ ಹಾಕಬಾರದು
ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಹೇಳುತ್ತಿದ್ದಾರೆ. ಸುಮ್ಮನೆ ಪ್ರಶ್ನಿಸಿದರೆ ಕಳ್ಳ ಎಂದಿಗು ಕಳ್ಳತನವನ್ನು ಒಪ್ಪಿಕೊಳ್ಳುವುದಿಲ್ಲ. ಎಫ್‌ಐಆರ್ ದಾಖಲಿಸಿ, ಬಂಧಿಸಿ ವಿಚಾರಣೆ ನಡೆಸಬೇಕು. ಚುನಾವಣೆ ರಣರಂಗದಲ್ಲಿ ನೇರಾನೇರ ಯುದ್ದ ಮಾಡಬೇಕು. ಬೆನ್ನಿಗೆ ಚೂರಿ ಹಾಕುವುದಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ ನಾನು ಗೆಲ್ಲುತ್ತೇನೆ
ಮತದಾನದ ಹೊತ್ತಿಗೆ ಗೊಂದಲ ನಿರ್ಮಾಣ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು. ಇವೆರಡು ಪ್ರಮುಖಾಂಶಗಳಾಗಿವೆ. ಮುಸ್ಲಿಮರು ಹೆಚ್ಚು ಮತದಾನ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆಯೋ ಇಲ್ಲವೊ ಅನ್ನುವುದು ವಿಶ್ಲೇಷಣೆ ಮಾಡಬೇಕಿದೆ. ಇವೆರಡು ಹೊರತು ಚುನಾವಣೆಯಲ್ಲಿ ತನಗೆ ಗೆಲ್ಲುವಾಗಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ – ‘ಗೀತಾ ಗೆಲುವಿಗೆ ಅದೇ ಪ್ರಮುಖ ಕಾರಣʼ, ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಗೆಲ್ಲುವ ವಿಶ್ವಾಸ, ಏನೆಲ್ಲ ಹೇಳಿದರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422