ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RESULT NEWS : ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ 23 ಅಭ್ಯರ್ಥಿಗಳ ಪೈಕಿ, 21 ಅಭ್ಯರ್ಥಿಗಳು ಠೇವಣಿ (Security Deposit) ಕಳೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೊರತು ಉಳಿದ್ಯಾವ ಅಭ್ಯರ್ಥಿಗಳಿಗು ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಠೇವಣಿ ಕಳೆದುಕೊಂಡ ಈಶ್ವರಪ್ಪ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ 30,050 ಮತ ಪಡೆದಿದ್ದಾರೆ. ಹಾಗಾಗಿ ಅವರು ಕೂಡ ಠೇವಣಿ ಕಳೆದುಕೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ 12,154 ಮತ ಹೊರತು ಉಳಿದ್ಯಾವ ಕ್ಷೇತ್ರದಲ್ಲಿಯ ಈಶ್ವರಪ್ಪ ಹತ್ತು ಸಾವಿರಕ್ಕಿಂತಲೂ ಹೆಚ್ಚು ಮತ ಪಡೆಯಲು ಸಾಧ್ಯವಾಗಿಲ್ಲ.
ಠೇವಣಿ ಕಳೆದುಕೊಳ್ಳುವುದು ಅಂದರೇನು?
ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಠೇವಣಿ ಪಾವತಿಸಬೇಕು. ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ 25 ಸಾವಿರ ರೂ. ಠೇವಣಿ ಭರಿಸಬೇಕು. ಪ್ರಜಾಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಚಲಾವಣೆಯಾದ ಒಟ್ಟು ಅರ್ಹ ಮತಗಳ ಪೈಕಿ ಆರನೇ ಒಂದು ಭಾಗಕ್ಕಿಂತಲೂ ಹೆಚ್ಚು ಮತ ಪಡೆಯಬೇಕು. ಉದಾಹರಣೆಗೆ 10 ಲಕ್ಷ ಮತ ಚಲಾವಣೆಯಾಗಿದ್ದರೆ 1.66 ಲಕ್ಷಕ್ಕಿಂತಲು ಹೆಚ್ಚು ಮತ ಪಡೆದವರು ಮಾತ್ರ ಠೇವಣಿ ಉಳಿಸಿಕೊಳ್ಳಲು ಸಾಧ್ಯ.
ಶಿವಮೊಗ್ಗದಲ್ಲಿ ಈ ಬಾರಿ ಚಲಾವಣೆಯಾಗಿದ್ದ ಒಟ್ಟು ಅರ್ಹ ಮತಗಳು 13,77,224. ಇದರಲ್ಲಿ ಆರನೇ ಒಂದು ಭಾಗ ಅಂದರೆ 2.29 ಲಕ್ಷಕ್ಕಿಂತಲು ಹೆಚ್ಚು ಮತ ಪಡೆಯಬೇಕು. 21 ಅಭ್ಯರ್ಥಿಗಳು ಇಷ್ಟು ಮತ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಠೇವಣಿ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಲೋಕಸಭೆ, ಯಾವ್ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಎಷ್ಟು ಮತ ಗಳಿಸಿದ್ದಾರೆ?