ಕುಂಚೇನಹಳ್ಳಿಯಲ್ಲಿ ಆಟಮ್‌, ವೆಂಕಟೇಶನಗರದಲ್ಲಿ ಹಬ್ಬದೂಟ, ಎಲ್ಲೆಲ್ಲಿ ಪ್ರಚಾರ ಮಾಡಿದರು ಗೀತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 10 APRIL 2024

ELECTION NEWS : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಯುಗಾದಿ ಹಬ್ಬದಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರ ಗಮನ ಸೆಳೆದರು. ಶಿವಮೊಗ್ಗ ನಗರ ಮತ್ತು ತಾಲೂಕನ ವಿವಿಧೆಡೆಗೆ ಪತಿ ಶಿವರಾಜ್‌ ಕುಮಾರ್‌ ಅವರೊಂದಿಗೆ ಭೇಟಿ ನೀಡಿದ್ದರು.

geetha shivaraj kumar campaign

ಬಸವ ಕೇಂದ್ರಕ್ಕೆ ಭೇಟಿ

ಗೀತಾ ಶಿವರಾಜಕುಮಾರ್ ಅವರು ನಗರದ ಬಸವಕೇಂದ್ರಕ್ಕೆ ಭೇಟಿ ನೀಡಿ ಶ್ರೀ ಬಸವ ಮರಳಸಿದ್ಧ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಬಸವ ಕೇಂದ್ರದ ಅಧ್ಯಕ್ಷ ಬೆನಕಪ್ಪ, ವೀರಶೈವ ಸಮಾಜದ ಮುಖಂಡರಾದ ರುದ್ರಮುನಿ ಸಜ್ಜನ್ ಸೇರಿ ಹಲವರು ಇದ್ದರು.

geetha shivaraj kumar campaign

ಸ್ಥಳೀಯರೊಂದಿಗೆ ನವ ಸಂವತ್ಸರ

ಶಿವಮೊಗ್ಗದ ಶುಭ ಮಂಗಳ ಕಲ್ಯಾಣ ಮಂಟಪ ಹಿಂಭಾಗದ ಶ್ರೀರಾಮನಗರ ಸರ್ಕಲ್‌ನಲ್ಲಿ ಸ್ಥಳೀಯರೊಂದಿಗೆ ಗೀತಾ ಶಿವರಾಜ್‌ ಕುಮಾರ್‌, ಪತಿ, ನಟ ಶಿವರಾಜ್‌ ಕುಮಾರ್‌ ಅವರು ಯುಗಾದಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು. ಸುತ್ತಮುತ್ತಲ ಬಡಾವಣೆಯ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಚುನಾವಣೆ ಸ್ಪರ್ಧೆಯ ಉದ್ದೇಶವನ್ನು ಗೀತಾ ಶಿವರಾಜ್‌ ಕುಮಾರ್‌ ತಿಳಿಸಿದರು. ಇದೇ ಸಂದರ್ಭ ಆಶ್ರಯ ಬಡಾವಣೆ ನಿವಾಸಿ ಕಲಾವತಿ ಎಂಬುವವರು ಬೆಳ್ಳಿ ಖಡ್ಗ ಉಡುಗೊರೆ ನೀಡಿದರು. ವೆಂಕಟೇಶ ನಗರದ ನಾಗೇಶ್‌ ಎಂಬುವವರ ಮನೆಯಲ್ಲಿ ಗೀತಾ ಶಿವರಾಜ್‌ ಕುಮಾರ್‌ ಮತ್ತು ನಟ ಶಿವರಾಜ್‌ ಕುಮಾರ್‌ ಅವರು ಯುಗಾದಿ ಊಟ ಸವಿದರು.

ಸಚಿವ ಮಧುಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಬಿ.ಪಾರಂ ಪಡೆದಿದ್ದಾರೆ. ಯುಗಾದಿ ಹಬ್ಬದ ಶುಭ ಘಳಿಗೆಯಲ್ಲಿ ಬಿ.ಫಾರಂ ಪಡೆದಿರುವುದರಿಂದ ಮುಂದೆ ಒಳಿತಾಗಲಿದೆಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿ

geetha shivaraj kumar campaign

ಕುಂಚೇನಹಳ್ಳಿಯಲ್ಲಿ ಆಟಮ್‌ನಲ್ಲಿ ಭಾಗಿ

ಇನ್ನೊಂದೆಡೆ ಶಿವಮೊಗ್ಗ ತಾಲೂಕು ಕುಂಚೇನಹಳ್ಳಿಯಲ್ಲಿ ಸ್ಥಳೀಯರೊಂದಿಗೆ ಯುಗಾದಿ ಆಚರಣೆಯಲ್ಲಿ ಭಾಗವಹಿಸಿದ್ದರು. ಕುಂಚೇನಹಳ್ಳಿಯ ಸೇವಾಲಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು, ತೆರೆದ ವಾಹನದಲ್ಲಿ ವೇದಿಕೆ ಬಳಿಗೆ ಸಾಗಿದರು.

geetha shivaraj kumar campaign

ಬಂಜಾರ ಸಮುದಾಯದ ಮಹಿಳೆಯರು ಗೀತಾ ಶಿವರಾಜಕುಮಾರ್ ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು. ಕಾಂಗ್ರೆಸ್‌ ಮುಖಂಡರು, ಕುಂಚೇನಹಳ್ಳಿಯ ಗ್ರಾಮಸ್ಥರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ – ಪಿಯುಸಿ ಫಲಿತಾಂಶ, ಶಿವಮೊಗ್ಗದ ಮೂವರಿಗೆ ರ‍್ಯಾಂಕ್‌, ಯಾರೆಲ್ಲ ರ‍್ಯಾಂಕ್‌ ಪಡೆದಿದ್ದಾರೆ? ಎಷ್ಟು ಅಂಕ ಗಳಿಸಿದ್ದಾರೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment