ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 DECEMBER 2022
ಶಿವಮೊಗ್ಗ : ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರು ಒಗ್ಗಟ್ಟಿನಿಂದ, ಇಚ್ಛಾಶಕ್ತಿ ಪ್ರದರ್ಶಿಸಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧರಿಸುವ ಸಂದರ್ಭ ಬಂದಿದೆ. ಎಲ್ಲಾ ಕಾರ್ಯಕರ್ತರು ಇದನ್ನು ಸವಾಲಾಗಿ (challenge) ಸ್ವೀಕರಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ದೀಪಕ್ ಸಿಂಗ್ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕಾಗೊಡು ತಿಮ್ಮಪ್ಪ ಅವರು, ದೇಶದಲ್ಲಿ ಸುದೀರ್ಘ ಅವಧಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದೆ. ಆದರೆ ಜಿಲ್ಲೆಯಲ್ಲಿ ಸಂಘಟನೆ ಕುಂಟಿತಗೊಂಡಿದೆ. ಪಕ್ಷವನ್ನು ಪುನಃ ಕಟ್ಟಿ, ಪ್ರವರ್ಧಮಾನಕ್ಕೆ ತರಬೇಕು ಎಂದು ತಿಳಿಸಿದರು. (challenge)
ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಕ್ಷೇತ್ರ, ಜಾತಿ ಲೆಕ್ಕಾಚಾರ ತಲೆ ಕೆಳಗಾಗಿಸಿದ ಕ್ಷೇತ್ರ, ಹಿನ್ನೆಲೆ ಏನು?
ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಕುರಿತು ಜನರಲ್ಲಿ ಈಗಲು ಒಳ್ಳೆಯ ಅಭಿಪ್ರಾಯವಿದೆ. ಕಾರ್ಯಕರ್ತರು ಜನರ ಮನೆ ಬಳಿ ಹೋಗಿ ಗಮನ ಸೆಳೆಯಬೇಕು. ಪಕ್ಷ ತೊರೆದವರನ್ನ ಪಕ್ಷಕ್ಕೆ ಕರೆತರಬೇಕು. ಬಿಜೆಪಿ ವಿರುದ್ಧ ನಾವು ಟೀಕೆ ಮಾಡುವುದನ್ನು ಬಿಟ್ಟು, ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಒಳ್ಳೆಯ ಕೆಲಸಗಳನ್ನು ಜನರ ಮುಂದಿಡುವ ಪ್ರಯತ್ನವಾಗಬೇಕು ಎಂದರು. (challenge)
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರು ಮಾತನಾಡಿ, ಉತ್ತರ ಬ್ಲಾಕ್ ನಲ್ಲಿ ಉತ್ತಮ ಮತಗಳು ಬಂದರೆ ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಬಹುತೇಕ ಮುಖಂಡರು ಇರುವುದು ಉತ್ತರ ಬ್ಲಾಕ್ ನಲ್ಲಿ. ಆದರೆ ಇಲ್ಲಿಯೆ ನಮ್ಮ ಮತ ಗಳಿಕೆ ಪ್ರಮಾಣ ಕಡಿಮೆ ಇದೆ. ಊರಿಗೆಲ್ಲ ನಾಯಕ, ಮನೆಯ ಮತ ಮಾತ್ರ ಪಕ್ಷಕ್ಕಿಲ್ಲ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ಸೇರಿದಂತೆ ಹಲವು ನಾಯಕರು ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422