SHIVAMOGGA LIVE NEWS | 30 MAY 2024
SHIMOGA : ಏಳು ಕೋಟಿ ಕನ್ನಡಿಗರ ಸಮಸ್ಯೆಗಳ ಕುರಿತು ಮಾತನಾಡಲು ಅಧ್ಯಯನ ಮತ್ತು ಅನುಭವ ಅಗತ್ಯ. ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳು (Candidates) ಇದನ್ನು ಹೊಂದಿದ್ದಾರೆ. ಆದ್ದರಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಆಯನೂರು ಮಂಜುನಾಥ್ ಯಾವುದೆ ಪಕ್ಷದಲ್ಲಿದ್ದರೂ ಜನಪರ ವಿಷಯಗಳಿಗಾಗಿ ತಮ್ಮದೆ ಪಕ್ಷದ ವಿರುದ್ದ ಮಾತನಾಡುವ ಧೈರ್ಯ ಹೊಂದಿದ್ದಾರೆ. ಈ ರೀತಿ ಹಲವು ಬಾರಿ ಮಾತನಾಡಿದಾಗ ಅವರನ್ನು ಪಕ್ಷದಿಂದ ಏಕೆ ಹೊರ ಹಾಕಿಲ್ಲ ಎಂದು ಯೋಚಿಸಿದ್ದೇನೆ. ಸದನದಲ್ಲಿ ಸುಮ್ಮನೆ ಕೈ ಎತ್ತುವವರು ಬೇಕಿಲ್ಲ. ಪ್ರಶ್ನಿಸುವವರು ಬೇಕು. ಆದ್ದರಿಂದ ಆಯನೂರು ಮಂಜುನಾಥ್ ಅವರಿಗೆ ಮತ ನೀಡುವುದು ಸೂಕ್ತ ಎಂದರು.
ಈ ಹಿಂದೆ ಬಿ.ಇಡ್ ಪದವಿ ಹೊಂದದ ಶಿಕ್ಷಕರಿಗೆ ವೇತನ ಸಹಿತ ಬಿ.ಇಡಿ ಪದವಿ ಮಾಡಲು ಅವಕಾಶ ಮಾಡಿಕೊಟ್ಟಿದ್ದೆವು. ಇದರಿಂದಾಗಿ ಹಲವು ಶಿಕ್ಷಕರು ಜೀವನಕ್ಕೆ ಅನುಕೂಲವಾಗಿದೆ. ಅದ್ದರಿಂದ ಶಿಕ್ಷಕರ ಕ್ಷೇತ್ರದಲ್ಲಿ ಮತ ಕೇಳು ಹಕ್ಕು ನಮಗಿದೆ. ನಮ್ಮ ಅಭ್ಯರ್ಥಿಗಳು ಗೆದ್ದರೆ ಹಳೆ ಪಿಂಚಣಿ ನೀತಿ ಜಾರಿ, ಕೇಂದ್ರ ಸರ್ಕಾರದ ಅವೈಜ್ಞಾನಿಕ ಕಾರ್ಮಿಕ ನೀತಿ ವಿರುದ್ಧ ಹೋರಾಟಕ್ಕೆ ಶಕ್ತಿ ಬರಲಿದೆ ಎಂದರು.
‘ಮೋದಿಗೆ 50 ಪುಸ್ತಕ ಕಳುಹಿಸುತ್ತೇನೆʼ
ಈಚೆಗೆ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಗಾಂಧಿ ಸಿನಿಮಾ ಬಂದ ಮೇಲೆ ಗಾಂಧೀಜಿ ಕುರಿತು ಜಗತ್ತಿಗೆ ಗೊತ್ತಾಯಿತು ಎಂದು ಹೇಳಿಕೆ ನೀಡಿದ್ದಾರೆ. ಗಾಂಧೀಜಿ ಕುರಿತು ಅಧ್ಯಯನ ನಡೆಸದ ಮೊದಲ ಪ್ರಧಾನಿ ಇವರು. ಆದ್ದರಿಂದ ಅವರಿಗೆ ಗಾಂಧೀಜಿ ಅವರ ಕುರಿತ 50 ಪುಸ್ತಕಗಳನ್ನು ಕಳುಹಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿಜಯಕುಮಾರ್, ಮುಡುಬ ರಾಘವೇಂದ್ರ, ಕಲೀಂಪಾಷಾ, ರಮೇಶ್ ಹೆಗ್ಡೆ, ಆದರ್ಶ ಹುಂಚದಕಟ್ಟೆ, ಚೇತನ್, ಹರ್ಷೇಂದ್ರ ಕುಮಾರ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ‘ಡಾ. ಧನಂಜಯ ಸರ್ಜಿ ಈ ರೀತಿ ಮಾಡುತ್ತಾರೆ ಅಂದುಕೊಂಡಿರಲಿಲ್ಲ’, ಈಶ್ವರಪ್ಪ ಆಕ್ರೋಶ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200