‘ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ, ಆ ವಿಚಾರ ಬಿಟ್ಟುಬಿಡಿ’

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜುಲೈ 2021

ಸುದ್ದಿಯ ಮುಂದಿನ ಭಾಗ ಕೆಳಗಿದೆ

ನಾನು ನಿಮಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಸುಮಲತಾ ಮತ್ತು ಕುಮಾರಸ್ವಾಮಿಯವರ ವಿಚಾರ ಬಿಟ್ಟು ಬಿಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಮಾಧ್ಯಮದವರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಿಮಗೆ ಬೇರೆ ಯಾವ ವಿಚಾರವೂ ಇಲ್ವಾ. ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳು ಇವೆ. ಅದನ್ನು ಬಿಟ್ಟು ಅವರು ಏನ್ ಹೇಳಿದ್ರು, ಇವರೇನು ಹೇಳಿದ್ರು ಅಂತ ತೋರಿಸುತ್ತೀರಾ. ಇದಕ್ಕೇನಾದ್ರು ಅರ್ಥ ಇದೆಯಾ ಎಂದು ಪ್ರಶ್ನಿಸಿದರು.

Nanjappa Hospital Advertisement

ಕೆಆರ್‌ಎಸ್ ಬಿರುಕು ವಿಚಾರದ ಕುರಿತು ಈಗಾಗಲೆ ಮುರುಗೇಶ್ ನಿರಾಣಿ ಸರ್ಕಾರದ ಪರವಾಗಿ ಹೇಳಿಕೆ ಕೊಟ್ಟಿದ್ದಾರೆ. ನಾನು ಅವರಿಬ್ಬರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಸಹೋದರಿ ಸುಮಲತಾ ಹಾಗೂ ಕುಮಾರಸ್ವಾಮಿ ಇಬ್ಬರ ಬಗ್ಗೆಯೂ ನನಗೆ ಗೌರವವಿದೆ. ಅವರಿಬ್ಬರು ವಾಗ್ವಾದ ನಿಲ್ಲಿಸಬೇಕು. ಅವರು ನಿಲ್ಲಿಸುತ್ತಾರೋ ಇಲ್ಲವೋ, ಟಿವಿಯವರು ಮೊದಲು ನಿಲ್ಲಿಸಿ ಎಂದು ಹೇಳಿದರು.

ಅವರಿಬ್ಬರು ಎಳೆದು ಕೊಂಡು ಹೋಗ್ತಾರೆ, ನೀವು ಹೋಗ್ತಿರಾ ಎಂದು ಗರಂ ಆದರು. ಜನ ಸಾಯ್ತಿದ್ದಾರೆ ಅದರ ಬಗ್ಗೆ ನೋಡಿ. ನಾನು ಮಾಧ್ಯಮದವರನ್ನು ಟೀಕೆ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದರು.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment