ಶಿವಮೊಗ್ಗ ಲೈವ್.ಕಾಂ |SHIMOGA NEWS | 29 ಜುಲೈ 2021
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಿಗೆ, ಉಪ ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ. ಈ ನಡುವೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇವತ್ತು ಸುದ್ದಿಗೋಷ್ಠಿ ನಡೆಸಿದರು. ಉಪ ಮುಖ್ಯಮಂತ್ರಿ ಹುದ್ದೆ ಮತ್ತು ಸಚಿವ ಸ್ಥಾನ ಸ್ಥಾನದ ಕುರಿತು ಹೇಳಿಕೆ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪತ್ರಿಕಾಗೋಷ್ಠಿಯಲ್ಲಿ ಹೇಳಿದ 5 ಪ್ರಮುಖ ಸಂಗತಿಗಳು
ಒಂದೇ ವಾರದಲ್ಲಿ ಸಿಎಂ ಬದಲಾವಣೆ ಕೆಲಸಗಳು ಮುಗಿದಿದೆ. ಇದು ನಮ್ಮ ಮುಖಂಡರ ಕೃಷ್ಣ ತಂತ್ರವಾಗಿದೆ. ಮುಂದಿನ ಚುನಾವಣೆ ಗಲುವಿಗಾಗಿ ಈ ಕೃಷ್ಣ ತಂತ್ರವಿದು. ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ರಾಮರಾಜ್ಯ ನಿರ್ಮಾಣ ಮಾಡುತ್ತೇವೆ.
ನಾವೆಲ್ಲ ರಾಜಕೀಯ ಮಾಡುತ್ತಿದ್ದೇವೆ. ಸನ್ಯಾಸಿಗಳಲ್ಲ. ಯಾವುದೆ ಆಡಿಯೋ ಬಂದರೂ ಲೆಕ್ಕಕ್ಕಿಲ್ಲ. ಪಕ್ಷದ ನಾಯಕರು ತೀರ್ಮಾನ ಕೈಗೊಂಡಂತೆ ಎಲ್ಲವೂ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತೆಗೆದುಕೊಂಡ ನಿಲುವು ನಾನು ತೆಗದುಕೊಳ್ಳುವುದಿಲ್ಲ. ಪಕ್ಷದ ನಾಯಕರು, ಹೈಕಮಾಂಡ್ ತೀರ್ಮಾನಕ್ಕೆ ನಾನು ತಯಾರಾಗಿದ್ದೇನೆ.
ಉಪ ಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ಯಾವುದೇ ಜವಾಬ್ದಾರಿ ನಿಭಾಯಿಸಲು ನಾನು ಸಿದ್ಧ. ಇದಕ್ಕಾಗಿ ಲಾಬಿ ಮಾಡಿ ನನಗೆ ಗೊತ್ತಿಲ್ಲ. ಸಂಘಟನೆ ಮಾಡುವಂತೆ ಪಕ್ಷ ಸೂಚನೆ ನೀಡಿದರೆ ಅದನ್ನು ಕೂಡ ನಿರ್ವಹಿಸಲು ಸಿದ್ಧ.
ತಮಗೆ ಮುಖ್ಯಮಂತ್ರಿ ಹುದ್ದೆಗೇರುವ ಅರ್ಹತೆಯಿತ್ತು. ನನಗಿಂತಲೂ ಹಿರಿಯರು, ಅನುಭವಿಗಳಿದ್ದರು. ಆದರೆ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷ ಆಯ್ಕೆ ಮಾಡಿತು. ಇನ್ನೆರಡು ವರ್ಷ ಪಕ್ಷ ಸಂಘಟನೆ ಮಾಡುವುದರ ಜೊತೆಗೆ ಉತ್ತಮ ಆಡಳಿತವನ್ನು ನೀಡುತ್ತೇವೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200