ಕೊನೆಯ ಹಂತಕ್ಕೆ ಮತ ಎಣಿಕೆ, ಗೆಲುವಿನ ಸನಿಹಕ್ಕೆ ಡಾ. ಸರ್ಜಿ, ಉಳಿದ ಅಭ್ಯರ್ಥಿಗಳು ಪಡೆದ ಮತಗಳೆಷ್ಟು?

SHIVAMOGGA LIVE NEWS | 6 JUNE 2024 ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

RESULT NEWS : ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ಕೊನೆಯ ಹಂತಕ್ಕೆ ತಲುಪಿದೆ. ನಾಲ್ಕು ಸುತ್ತಿನ ಎಣಿಕೆ ಪೂರ್ಣಗೊಂಡಿದೆ. ಕೊನೆಯ ಸುತ್ತಿನ (Last Round) ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಹೆಚ್ಚಿನ ಪ್ರಮಾಣದಲ್ಲಿ ಮೊದಲ ಪ್ರಾಶಸ್ತ್ಯದ ಮತ ಗಳಿಸಿದ್ದಾರೆ.

ಕೊನೆಯ ಸುತ್ತಿನಲ್ಲಿ ಇನ್ನು 2 ಸಾವಿರದಷ್ಟು ಮೊದಲ ಪ್ರಾಶಸ್ತ್ಯದ ಮತ ಲಭಿಸಿದರೆ ಡಾ. ಧನಂಜಯ ಸರ್ಜಿ ಗೆಲ್ಲಲಿದ್ದಾರೆ. ಇಲ್ಲವಾದಲ್ಲಿ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 4ನೇ ಸುತ್ತಿನಲ್ಲಿ ಪ್ರಮುಖ ಅಭ್ಯರ್ಥಿಗಳು ಗಳಿಸಿದ ಮತಗಳ ವಿವರ ಇಲ್ಲಿದೆ. 

Dr Dhananjaya Sarji

ಡಾ.ಧನಂಜಯ ಸರ್ಜಿ (ಬಿಜೆಪಿ)

4ನೇ ಸುತ್ತಿನಲ್ಲಿ ಗಳಿಸಿದ್ದು
8544
ಈವರೆಗಿನ ಒಟ್ಟು ಮತ
31,199

Ayanuru Manjunatha

ಆಯನೂರು ಮಂಜುನಾಥ್ (ಕಾಂಗ್ರೆಸ್)

4ನೇ ಸುತ್ತಿನಲ್ಲಿ ಗಳಿಸಿದ್ದು
2988
ಈವರೆಗಿನ ಒಟ್ಟು ಮತ
11,226

Rahupathi%20Bhat

ರಘುಪತಿ ಭಟ್ (ಪಕ್ಷೇತರ)

4ನೇ ಸುತ್ತಿನಲ್ಲಿ ಗಳಿಸಿದ್ದು
731
ಈವರೆಗಿನ ಒಟ್ಟು ಮತ
6564

SP Dinesh

ಎಸ್‌.ಪಿ.ದಿನೇಶ್‌ (ಪಕ್ಷೇತರ)

4ನೇ ಸುತ್ತಿನಲ್ಲಿ ಗಳಿಸಿದ್ದು
446
ಈವರೆಗಿನ ಒಟ್ಟು ಮತ
2203

ಇದನ್ನೂ ಓದಿ – ಮೂರನೇ ಸುತ್ತಿನ ಎಣಿಕೆ ಪೂರ್ಣ, ಡಾ. ಸರ್ಜಿಗೆ ಮತಗಳು ಹೆಚ್ಚಳ, ಆಯನೂರು ಗಳಿಸಿದ್ದೆಷ್ಟು?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment