ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
ರಾಜ್ಯ ಸರ್ಕಾರದ ಅನುದಾನ ವಿಚಾರ
ಮಧು ಬಂಗಾರಪ್ಪ : ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಯೋಜನೆಗಳಿಗೆ ನಮ್ಮ ಗಮನಕ್ಕೆ ತಾರದೆ ರಿಬ್ಬನ್ ಕತ್ತರಿಸುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ಬಿಜೆಪಿ ಸರ್ಕಾರವೇ ಇದೆ ಅಂದುಕೊಂಡಿದ್ದಾರೆ. ಸಂಸದರೇ ಸರ್ಕಾರ ಬದಲಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದೆ. ಜಿಲ್ಲಾ ಮಂತ್ರಿಯಾಗಿ ನಾನಿದ್ದೇನೆ ಅನ್ನುವುದನ್ನು ಮರೆಯಬೇಡಿ. ರಿಬ್ಬನ್ ಕತ್ತರಿಸುವುದು ಬಿಜೆಪಿಯವರಿಗೆ ಒಂದು ರೋಗವಾಗಿದೆ.
ಬಿ.ವೈ.ರಾಘವೇಂದ್ರ : ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದಿಂದ ಒಂದೇ ಒಂದು ರೂ. ಕೊಡುಗೆ ಇಲ್ಲ. ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಹಿಂಪಡೆಯಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ 36 ಕೋಟಿ ರೂ. ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಚಂದ್ರಗುತ್ತಿಗೆ ಬಿಡುಗಡೆಯಾಗಿದ್ದ 1 ಕೋಟಿ ರೂ., ಕದಂಬರ ಜಾಗ ಅಭಿವೃದ್ಧಿ, ಶಕ್ತಿ ಮಾತಾಂಗ ದೇವಿ ದೇಗುಲ, ಸಕ್ರೆಬೈಲ್ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 17 ಕೋಟಿ ರೂ. ಹಿಂಪಡೆಯಲಾಗಿದೆ. ಸಣ್ಣ ನೀರಾವರಿ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 150 ಕೋಟಿ ರೂ. ತಡೆ ಹಿಡಿದಿದೆ. ಈ ಬಗ್ಗೆ ಸಚಿವರಿಗೆ ಗೊತ್ತಿಲ್ಲವೆ?
ಇನ್ನಷ್ಟು ಓದಲು NEXT ಬಟನ್ ಕ್ಲಿಕ್ ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422