ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
ವಿಮಾನ ನಿಲ್ದಾಣದ ಖರ್ಚು
ಮಧು ಬಂಗಾರಪ್ಪ : ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾತು ಕೇಳಿ ಬಂದಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ವಿಮಾನ ನಿಲ್ದಾಣದ ಕ್ರಿಯಾಯೋಜನೆ 249 ಕೋಟಿ ರೂ. ಇತ್ತು. ವರ್ಷದಿಂದ ವರ್ಷಕ್ಕೆ ಏರಿಕೆ ಮಾಡಿ 450 ಕೋಟಿ ರೂ.ಗೆ ಹೆಚ್ಚಳವಾಗಿತ್ತು. ಕಾಮಗಾರಿ ವಿಳಂಬ ಆಗಿದ್ದೇಕೆ? ಬಜೆಟ್ ಹೆಚ್ಚಳವಾಗಿದ್ದೇಕೆ? ಎಂಬುದರ ಕುರಿತು ಸಮಗ್ರ ತನಿಖೆ ಆಗಬೇಕು. ಕಲಬುರಗಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಇಲ್ಲಿ ಅಧಿಕವಾಗಿದ್ದು ಏಕೆ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.
ಬಿ.ವೈ.ರಾಘವೇಂದ್ರ : ವಿಮಾನ ನಿಲ್ದಾಣದ ರನ್ವೇ ಮೊದಲು 1100 ಮೀಟರ್ ಇತ್ತು. ಆಗ 150 ಕೋಟಿ ರೂ. ಅನುದಾನ ನೀಡಲಾಗಿತ್ತು. ಬಳಿಕ ರನ್ ವೇ 3600 ಮೀಟರ್ಗೆ ವಿಸ್ತರಿಸಲಾಯಿತು. ಇದರಿಂದ ವೆಚ್ಚ 450 ಕೋಟಿ ರೂ.ಗೆ ತಲುಪಿತು. ಕಳೆದ ಆರು ತಿಂಗಳಿಂದ ತನಿಖೆ ವಿಮಾನ ನಿಲ್ದಾಣದ ವೆಚ್ಚದ ಕುರಿತು ತನಿಖೆ ನಡೆಸುವುದಾಗಿ ಸಚಿವ ಮಧು ಬಂಗಾರಪ್ಪ ಅವರು ಹೇಳುತ್ತಿದ್ದಾರೆ. ಪ್ರತಿ ದಿನ ಸಚಿವರೇ ವಿಮಾನದಲ್ಲಿ ಓಡಾಡುತ್ತಿದ್ದಾರೆ. ನಿತ್ಯ ಪತ್ರಿಕಾಗೋಷ್ಠಿ ನಡೆಸಿ ತನಿಖೆ ಮಾಡುವುದಾಗಿ ಯಾರನ್ನೂ ಹೆದರಿಸುವುದು ಬೇಡ. ಸಾಧ್ಯವಾದರೆ ತನಿಖೆ ಮಾಡಿಸಲಿ.
ಇನ್ನಷ್ಟು ಓದಲು NEXT ಬಟನ್ ಕ್ಲಿಕ್ ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422