ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಜನವರಿ 2022
ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ವಿಧಾನ ಪರಿಷತ್ ನೂತನ ಸದಸ್ಯ ಡಿ.ಎಸ್.ಅರುಣ್ ಅವರೊಂದಿಗೆ ಸಂವಾದ ಆಯೋಜಿಸಲಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಂವಾದದಲ್ಲಿ ಡಿ.ಎಸ್.ಅರಣ್ ಹೇಳಿದ ಟಾಪ್ 10 ಸಂಗತಿಗಳಿವು
ಸಿಕ್ಕ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಬೇಕು. ನಿಗಮದ ಅಧ್ಯಕ್ಷರ ಸ್ಥಾನ ನೀಡಿದಾಗ ನನ್ನ ರಾಜಕೀಯ ಜೀವನ ಮುಗಿಯಿತು ಎಂದು ಹೇಳಿದವರಿದ್ದಾರೆ. ಆದರೆ ನಿಗಮದ ಜವಾಬ್ದಾರಿಯನ್ನು ಚನ್ನಾಗಿ ನಿಭಾಯಿಸಿದ ಕಾರಣಕ್ಕೆ ಟಿಕೆಟ್ ಸಿಕ್ಕಿದೆ.
ಯಡಿಯೂರಪ್ಪ ಅವರು ಬಂದಿದ್ದರಿಂದ ಚುನಾವಣಾ ಕಣ ಟೇಕಾಫ್ ಆಯ್ತು. ಐದು ಕ್ಲಸ್ಟರ್ ಮಾಡಿಕೊಂಡು ಗ್ರಾಮ ಪಂಚಾಯತಿ ಸದಸ್ಯರನ್ನು ಭೇಟಿಯಾದೆವು. ಮೊದಲೆರಡು ಭಾರಿ ನನ್ನ ವಿಚಾರಗಳನ್ನು ತಿಳಿಸಿದೆ. ಮೂರನೆ ಭೇಟಿ ವೇಳೆ ಗ್ರಾಮ ಪಂಚಾಯಿತಿ ಸದಸ್ಯರು ನನ್ನ ಜೊತೆಗೆ ಫೋಟೊ ತೆಗೆಸಿಕೊಳ್ಳಲು ಆರಂಭಿಸಿದರು. ಇದು ಗೆಲುವಿನ ವಿಶ್ವಾಸ ಮೂಡಿಸಿತು.
ಚುನಾವಣೆ ಅಂದರೆ ಜಾತಿ ಲೆಕ್ಕಾಚಾರ ಆರಂಭವಾಗುತ್ತದೆ. ಆದರೆ ಈ ಚುನಾವಣೆಯಲ್ಲಿ ನಮ್ಮ ಸಮುದಾಯದ ಮತದಾರರ ಸಂಖ್ಯೆ ಕೇವಲ ಎರಡು. ಆದರೂ ಮತದಾರರು ಜಾತಿಗೆ ಪ್ರಾಧಾನ್ಯ ನೀಡದೆ ಗೆಲವು ನೀಡಿದ್ದಾರೆ.
180 ಮಂದಿ 20 ಮನೆಗೆ ಹೋಗದೆ ಕೆಲಸ ಮಾಡಿದ್ದರು. ನಾನು ಒಂದು ಕಡೆ ಹೋಗಿ ಪ್ರಚಾರ ಮಾಡಿ ಬಂದ ಬಳಿಕ ಪ್ರತಿಕ್ರಿಯೆ ಪಡೆಯುತ್ತಿದ್ದರು. ತಪ್ಪುಗಳೇನು, ತಿದ್ದಿಕೊಳ್ಳಬೇಕಾ ಎಂದು ಪರಿಶೀಲಿಸುತ್ತಿದ್ದರು.
ಚುನಾವಣೆ ಸಂದರ್ಭ ನಾನು ತುಂಬಾ ತಾಳ್ಮೆಯಿಂದ ಇದ್ದೆ. ಸೋತರೆ ಇದೊಂದು ಪಾಠವಾಗಲಿದೆ. ಗೆದ್ದರೆ ನಿರೀಕ್ಷೆಗಳನ್ನು ಈಡೇರಿಸುವತ್ತ ಗಮನ ಹರಿಸುತ್ತೇನೆ ಅಂದುಕೊಂಡಿದ್ದೆ.
ಸದ್ಯ ಹಲವು ಗ್ರಾಮಗಳಲ್ಲಿ ರಸ್ತೆಗಳು ಚನ್ನಾಗಿ ಆಗಿವೆ. ಪ್ರಮುಖವಾಗಿ ಡಿಜಿಟಲಿಕರಣ ಮಾಡಬೇಕಿದೆ. ಎರಡ್ಮೂರು ಗ್ರಾಮ ಪಂಚಾಯಿತಿಗಳನ್ನು ಪ್ರಾಥಮಿಕವಾಗಿ ಡಿಜಿಟಲಿಕರಣ ಮಾಡುವತ್ತ ಯೋಚಿಸಿದ್ದೇನೆ. ಇದಕ್ಕೆ ಓಎಫ್ಸಿ ಕೇಬಲ್ ಅಳವಡಿಕೆ ಮಾಡುವತ್ತ ಚರ್ಚೆ ನಡೆಯುತ್ತಿದೆ. ಅಲ್ಲಿನ ಅವಶ್ಯಕತೆಗೆ ಬೇಕಿರುವುದು ಮಾಡುವತ್ತ ಕೆಲಸ ಮಾಡುತ್ತೇನೆ.
ವಿಧಾನ ಪರಿಷತ್ ಅಂದರೆ ಹಿರಿಯರ ಸದನ ಅಂತಾರೆ. ನಾನು ಅತ್ಯಂತ ಕಿರಿಯನಾಗಲಿಲ್ಲವೆ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಕಾಕತಾಳಿಯ ಎಂಬಂತೆ ನಮ್ಮ ತಂದೆಯವರು ಕೂಡ ಇದೆ ವಯಸ್ಸಿಗೆ ಹೋಗಿದ್ದರು.
ಹಳ್ಳಿ ಹಳ್ಳಿಗೆ ಪ್ರವಾಸ
365 ಗ್ರಾಮ ಪಂಚಾಯತಿಗಳಿವೆ. ಜ.31 ಅಥವಾ ಫೆ.15ರ ಬಳಿಕ ಒಂದು ಪಂಚಾಯತಿಗೆ ಒಂದು ಗಂಟೆ ಭೇಟಿ ನೀಡುತ್ತೇನೆ. ಪ್ರಶ್ನಾವಳಿ ಸಿದ್ದಪಡಿಸಿಕೊಂಡು ಏನಿಲ್ಲ? ಏನು ಅಗತ್ಯವಿದೆ ಎಂಬುದರ ಕುರಿತು ಮಾಹಿತಿ ಪಡೆಯುತ್ತೇನೆ. ಇದಕ್ಕಾಗಿ ಸಿದ್ಧತೆಗಳು ಆರಂಭವಾಗಿದೆ. ದಿನಕ್ಕೆ 12 ಗಂಟೆ ಕ್ಷೇತ್ರಕ್ಕೆ ಕೆಲಸ ಮಾಡುತ್ತೇನೆ ಅಂದಿದ್ದೆ. ಅದನ್ನು ಮಾಡುತ್ತೇನೆ.
ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡ ಮಾಡಲಿದ್ದೇವೆ. ಯೋಜನೆಗಳೇನು, ಕೇಂದ್ರ, ರಾಜ್ಯ ಸರ್ಕಾರದ ಅನುದಾನಗಳೇನು ಎಂಬುದರ ಜಾಗೃತಿ ಮೂಡಿಸುತ್ತೇವೆ. ಫೆಬ್ರವರಿ ತಿಂಗಳಲ್ಲೆ ಈ ಕಾರ್ಯ ನಡೆಯಲಿದೆ.
ಗ್ರಾಮ ಪಂಚಾಯಿತಿಗಳಿಗೆ ನಮಗೆ ಅನುದಾನ ಕಡೆಮೆ ಇದೆ. ಸರಿಯಾದ ದಾಖಲೆಗಳನ್ನು ಸಿದ್ಧಪಡಿಸಬೇಕು. ಆ ಕೆಲಸ ಮಾಡಿದರೆ ಸರ್ಕಾರದಿಂದ ಹೆಚ್ಚು ಅನುದಾನ ಲಭಿಸಲಿದೆ. ಇದಕ್ಕಾಗಿ ಕ್ರಮ ವಹಿಸುತ್ತೇನೆ.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೇರಿಗೆ, ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ ಯಡಗೆರೆ ಇದ್ದರು.