ಸಂಸದ ರಾಘವೇಂದ್ರ | ರಾತ್ರೋರಾತ್ರಿ ಹಿಂದೂಗಳನ್ನು ಮನೆಯಿಂದ ಹೊರಗೆ ಹಾಕಿಸಿದವರಿಂದ ಆಡಳಿತ ನಡೆಸುವುದನ್ನು ಕಲಿಯಬೇಕಿಲ್ಲ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA | 21 ಡಿಸೆಂಬರ್ 2019

ತುರ್ತು ಪರಿಸ್ಥಿತಿ, ಸಿಖ್ಖರ ಮೇಲೆ ದಾಳಿ, 1990ರಲ್ಲಿ ಹಿಂದೂಗಳನ್ನು ರಾತ್ರೋರಾತ್ರಿ ಮನೆ ಬಿಡಿಸಿ ಓಡಿಸಿದ ಘಟನೆಗಳೆಲ್ಲ ಯಾರ ಕಾಲದಲ್ಲಿ ಅನ್ನುವುದು ಎಲ್ಲರಿಗು ಗೊತ್ತಿದೆ ಅಂತಾ ಕಾಂಗ್ರೆಸ್ ಪಕ್ಷದ ವಿರುದ್ಧ ಸಂಸದ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಜನರಿಗೆ ತಪ್ಪು ಮಾಹಿತಿ ನೀಡಿ, ಗಲಾಟೆಗೆ ಪ್ರಚೋದನೆ ನೀಡುತ್ತಿವೆ. ಇವರಿಂದ ಆಡಳಿತ ನಡೆಸುವುದನ್ನು ಕಲಿಯಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಂತ ರಾಜ್ಯವನ್ನು ವಿನಾಶಕ್ಕೆ ಕೊಂಡೊಯ್ಯತ್ತಿದ್ದಾರೆ

ಪೌರತ್ವ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದಿಂದ ಅಂಗೀಕಾರ ಮಾಡಲಾಗಿದೆ. ಆದರೆ ರಾಜಕೀಯ ಪಕ್ಷಗಳ ಪ್ರಚೋದನೆಯಿಂದಾಗಿ ಆತಂಕಕಾರಿ ಘಟನೆ ನಡೆಯುತ್ತಿವೆ. ಶಾಂತ ರಾಜ್ಯವನ್ನು ಈ ಪಟ್ಟಭದ್ರ ಹಿತಾಸಕ್ತಿಗಳು ವಿನಾಶಕ್ಕೆ ಕೊಂಡೊಯ್ಯುತ್ತಿವೆ. ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಸಂಸದ ರಾಘವೇಂದ್ರ ಆರೋಪಿಸಿದರು.

80710221 1006198606408226 5091925256893890560 n.jpg? nc cat=106& nc ohc=tenEbFOgXYgAQkkCy6t3OJHNjcOx1Z5n9eASwOHc2gkO7h9hU2GC0NjCw& nc ht=scontent.fblr11 1

ಅಲ್ಪಸಂಖ್ಯಾತರು ಗಾಬರಿ ಆಗಬಾರದು

ಪೌರತ್ವ ಕಾಯ್ದೆಯಿಂದ ಅಲ್ಪಸಂಖ್ಯಾತರು ಗಾಬರಿ ಆಗುವ ಅಗತ್ಯವಿಲ್ಲ. ಕಾಯ್ದೆಯಲ್ಲಿ ಎಲ್ಲವು ಸ್ಪಷ್ಟವಾಗಿ ಇದೆ. ವಿರೋಧ ಪಕ್ಷದ ಮುಖಂಡರು ಭಾರತದ ಒಗ್ಗಟ್ಟು ಹಾಳುಗೆಡವುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮಾಜಿ ಶಾಸಕ ಕುಮಾರಸ್ವಾಮಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Shimoga MP BY Raghavendra Press Meet on CAA and he alleged against Congress Party. Shivamogga Live.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment