SHIVAMOGGA LIVE NEWS | 3 FEBRUARY 2023
SHIMOGA : ವಿಧಾನ ಸಭೆ ಚುನಾವಣೆಗೆ ಶಿವಮೊಗ್ಗ ನಗರದಿಂದ ಬಿಜೆಪಿ ಅಭ್ಯರ್ಥಿ (BJP Candidate) ಯಾರಾಗುತ್ತಾರೆ ಎಂಬ ಕುತೂಹಲದ ನಡುವೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಆಯನೂರು ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂಬ ಪೋಸ್ಟ್ (Post) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದೆ. ಹಾಗಾಗಿ ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆ.ಈ.ಕಾಂತೇಶ್ ಅವರು ತಮ್ಮ ಉತ್ತರಾಧಿಕಾರಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರು ಬಿಂಬಿಸಲು ಮುಂದಾಗಿದ್ದಾರೆ. ಈ ನಡುವೆ ಆಯನೂರು ಮಂಜುನಾಥ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ (Viral) ಆಗಿದೆ.
ಏನಿದು ಪೋಸ್ಟ್?
ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಆಯನೂರು ಮಂಜುನಾಥ್ ಅವರ ಪರವಾಗಿ ಪೋಸ್ಟರ್ ಗಳು ಷೇರ್ ಆಗುತ್ತಿವೆ. ‘ನಗರದಲ್ಲಿ ಶಾಂತಿ ನೆಮ್ಮದಿಗಾಗಿ ಕೈಗಾರಿಕೆ, ವ್ಯಾಪಾರ, ವಹಿವಾಟುಗಳು ನಿರ್ಭಯವಾಗಿ ನಡೆದು ಬಡವರ ಬದುಕು ಹಸನಾಗಿಸಲು ಆಯನೂರು ಮಂಜುನಾಥ್ ಅವರಿಗೆ ಅವಕಾಶ ಸಿಗಲಿ’ ಎಂದು ಪೋಸ್ಟರ್ ಗಳು ವೈರಲ್ ಆಗುತ್ತಿವೆ.
ಎಲ್ಲೆಲ್ಲಿ ವೈರಲ್ ಆಗುತ್ತಿದೆ?
ಆಯನೂರು ಮಂಜುನಾಥ್ ಅವರು ಕಾರ್ಮಿಕ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಕಾರ್ಮಿಕರ ವಲಯದಲ್ಲಿ ಈ ಪೋಸ್ಟರ್ ಹೆಚ್ಚಿಗೆ ಷೇರ್ ಆಗುತ್ತಿದೆ. ಕಾರ್ಮಿಕರ ವಾಟ್ಸಪ್ ಗುಂಪುಗಳು, ಶಿಕ್ಷಕರು, ಉಪನ್ಯಾಸಕರ ಗುಂಪುಗಳು, ಉದ್ಯಮಿಗಳ ವಲಯದಲ್ಲಿ ಪೋಸ್ಟರ್ ಷೇರ್ ಆಗುತ್ತಿದೆ. ಫೇಸ್ ಬುಕ್ಕಿನಲ್ಲಿಯು ಕೂಡ ಪೋಸ್ಟರ್ ಕಾಣಸಿಗುತ್ತಿದೆ.
ಇನ್ನೊಂದು ವರ್ಷ ಅವಧಿ ಇದೆ
ಆಯನೂರು ಮಂಜುನಾಥ್ ಅವರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. 2024ರ ಜೂನ್ ವರೆಗೆ ಅವರಿಗೆ ಅಧಿಕಾರವಧಿ ಇದೆ. ಹೀಗಿದ್ದೂ ಅವರ ಅಭಿಮಾನಿಗಳು ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರು 2018ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವಾಗ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು. ಅವರ ಎಂ.ಎಲ್.ಸಿ ಅವಧಿ ಇನ್ನೂ ಎರಡು ವರ್ಷವಿತ್ತು. ಈಗಿನ ಎಂ.ಎಲ್.ಸಿ ರುದ್ರೇಗೌಡ ಅವರು ಆಗ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಕೆ.ಎಸ್.ಈಶ್ವರಪ್ಪ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಅದೆ ರೀತಿ ಆಯನೂರು ಮಂಜುನಾಥ್ ಅವರಿಗೂ ಅವಕಾಶ ಸಿಗಬಹುದು ಎಂಬುದು ಅವರ ಅಭಿಮಾನಿಗಳ ವಿಶ್ವಾಸ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ 3 ಗ್ರಾಮ ಪಂಚಾಯಿತಿಯ 4 ಸ್ಥಾನಕ್ಕೆ ಉಪ ಚುನಾವಣೆ, ದಿನಾಂಕ ನಿಗದಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200