ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 OCTOBER 2023
SHIMOGA : ರಾಗಿಗುಡ್ಡದಲ್ಲಿನ ಘಟನೆ ಪೂರ್ವ ನಿಯೋಜಿತ (Pre Planned). ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಒತ್ತಾಯಿಸಿದರು.
ಕಲ್ಲು ತೂರಾಟ ಘಟನೆ ಬೆನ್ನಿಗೆ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ರಾಗಿಗುಡ್ಡಕ್ಕೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನದಿಂದ ಹೊರಗಿನಿಂದ ಅನೇಕ ವಾಹನಗಳು ಬಂದಿವೆ. ಕೆಎ 35, ಕೆಎ 19 ಮತ್ತು ಯುಪಿ ನೋಂದಣಿ ಇರುವ ವಾಹನಗಳು ಬಂದಿವೆ. ಈ ವಾಹನಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹಿಂತಿರುಗಿ ಬಂದವರು ಮನೆಗಳಿಗೆ ನುಗ್ಗಿದರು
ಮೆರವಣಿಗೆ ಮುಂದೆ ಸಾಗಿದ ಮೇಲೆ ಒಂದು ಗುಂಪು ಹಿಂತಿರುಗಿದೆ. ಅವರು ತಮ್ಮ ಮನೆಗಳಿಗೆ ಮರಳುವ ಬದಲು ಬೇರೆ ಮನೆಗಳಿಗೆ ನುಗ್ಗಿದ್ದಾರೆ. ಶಾಂತಮ್ಮ ಎಂಬ ಮಹಿಳೆಯ ಕೂದಲು ಹಿಡಿದು ಎಳೆದಾಡಿದ್ದಾರೆ. ಬಿಡಿಸಲು ಹೋದ ಯುವಕನ ಮೇಲು ಹಲ್ಲೆ ನಡೆಸಿದ್ದಾರೆ. ವಿವಿಧ ಅಡ್ಡರಸ್ತೆಗಳಲ್ಲಿ ಆಟೋಗಳು, ವಾಹನಗಳು, ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ಘಟನೆ ಪೂರ್ವ ನಿಯೋಜಿತ ಎಂದು ಅನಿಸುತ್ತದೆ ಎಂದು ಶಾಸಕ ಚನ್ನಬಸಪ್ಪ ಆರೋಪಿಸಿದರು.
ಇದನ್ನೂ ಓದಿ – ರಾಗಿಗುಡ್ಡದಲ್ಲಿ ಕಲ್ಲು ತೂರಿ ಅಡಗಿ ಕುಳಿತಿದ್ದವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು
ಆನೇಕರು ಆಸ್ಪತ್ರೆಗೆ ಹೋಗಿಲ್ಲ
ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ, ಒಬ್ಬ ಮಹಿಳೆ, ಒಬ್ಬ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದ ಮಾಹಿತಿ ಲಭ್ಯವಾಗಿದೆ. ಅನೇಕರು ಗಾಯಗೊಂಡಿದ್ದು ಇನ್ನು ಮನೆಯಲ್ಲೇ ಇದ್ದಾರೆ. ಅವರೆಲ್ಲ ಹೊರಗೆ ಬರಲು ಹೆದರುತ್ತಿದ್ದಾರೆ. ಶಾಂತಿನಗರವನ್ನು ಶಾಂತವಾಗಿರಿಸಲು ಪ್ರಯತ್ನಿಸುತ್ತೇವೆ. ಸಾರ್ವಜನಿಕರು ಯಾವುದೆ ಮಾಹಿತಿ ಇದ್ದರು ಪೊಲೀಸರು ಮತ್ತು ತಮಗೆ ತಿಳಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ – ರಾಗಿಗುಡ್ಡದಲ್ಲಿ ಬಿಗಿ ಬಂದೋಬಸ್ತ್, RAF ಸಿಬ್ಬಂದಿಯಿಂದ ರೂಟ್ ಮಾರ್ಚ್
ರಕ್ಷಣೆ ಕೊಡುವ ಮಾನಸಿಕತೆ
ರಕ್ಷಣೆ ಕೊಡುವವರು ಇದ್ದಾರೆ ಎಂದರೆ ಅವರು ಬಾಲ ಬಿಚ್ಚುವುದು ಸಹಜ. ರಕ್ಷಣೆ ಕೊಡುವ ಮಾನಸಿಕತೆಯಲ್ಲಿ ಸರ್ಕಾರದ ಮಾತು ಇದೆ. ಈ ಘಟನೆ ಹಿನ್ನೆಲೆ ಸರ್ಕಾರವು ಯೋಚನೆ ಮಾಡಬೇಕು. ಕ್ಷುಲಕ ಕಾರಣಕ್ಕೆ ಇಂತಹ ಕೃತ್ಯ ಎಸಗುವವರಿಗೆ ಶಕ್ತಿ ಕೊಡುವಂತಹ ಪ್ರಯತ್ನ ಆಗಬಾರದು ಎಂದು ಸರ್ಕಾರದ ವಿರುದ್ದ ಶಾಸಕ ಚನ್ನಬಸಪ್ಪ ಹರಿಹಾಯ್ದರು.
ಇದನ್ನೂ ಓದಿ – ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ, 144 ಸೆಕ್ಷನ್ ಜಾರಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422