ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021
ಕೇಂದ್ರದ ಸರ್ಕಾರದ್ದು ಕಾಗದದ ಬಜೆಟ್ ಹೊರತು ಕಾರ್ಯಗವಾಗದ ಬಜೆಟ್ ಎಂದು ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟೀಕಿಸಿದರು.
![]() |
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್, ಕೇಂದ್ರದ ಬಜೆಟ್ ನಿರಾಶದಾಯಕವಾಗಿದೆ. ಇದೊಂದು ಜನವಿರೋಧಿ, ರೈತವಿರೋಧಿ, ಕಾರ್ಮಿಕ ವಿರೋಧಿ ಮತ್ತು ಕಳಪೆ ಬಜೆಟ್ ಆಗಿದೆ. ಇದರಲ್ಲಿ ಘೋಷಣೆ ಮಾಡಿರುವ ಯಾವ ಭರವಸೆಗಳು ಈಡೇರುವುದಿಲ್ಲ. ಇದೊಂದು ಡಿಜಿಟಲ್ ಬಜೆಟ್ ಮಾತ್ರ ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ
ಕೃಷಿ ಉತ್ಪನ್ನಗಳಿಗೆ ಸೆಸ್ ಹಾಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಸಿದ್ದಾರೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಸಲಾಗಿದೆ. ದಿನಸಿ ಬೆಲೆಗಳು ಗಗನಕ್ಕೇರಿದೆ. ಕೃಷಿ, ಆರೋಗ್ಯ, ಶಿಕ್ಷಣ ಹೀಗೆ ಎಲ್ಲಾ ರಂಗಕ್ಕೂ ಆದ್ಯತೆ ನೀಡಿಲ್ಲ. ಜಿ.ಡಿ.ಪಿ.ಕುಸಿದಿದೆ, ಉದ್ಯೋಗ ಭರವಸೆಗಳಿಲ್ಲ, ದೇಶದ ಸಾಲ ಹೆಚ್ಚಿದೆ, ಶೇ 20 ರಷ್ಟು ಬಡ್ಡಿ ಕಟ್ಟುತ್ತಿದ್ದೇವೆ. ಯಥಾ ಪ್ರಕಾರ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಅಂಬಾನಿ, ಅದಾನಿ, ಟಾಟಾ ಬಿರ್ಲಾ ಮುಂತಾದ ಉದ್ಯಮಗಳ ಏಜೆಂಟ್ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ. ಹಾಗಾಗಿ ಇದು ಜನವಿರೋಧಿ ಕಳಪೆ ಬಜೆಟ್ ಆಗಿದೆ ಎಂದರು.
ನಿರ್ಮಲಾ ಸೀತರಾಮನ್ ಅವರು ಈ ಹಿಂದೆ ಮಂಡಿಸಿದ ಬಜೆಟ್‍ನಲ್ಲಿ ಆದ ಘೋಷಣೆಗಳು ಕಾಗದದಲ್ಲೇ ಉಳಿದಿದೆ. ಸ್ವಚ್ಚ ಭಾರತದ ಹೆಸರು ಹೇಳುತ್ತಾ ಬಂದಿದ್ದ ಬಿಜೆಪಿ ಸರ್ಕಾರ ಶಿವಮೊಗ್ಗದಂತಹ ನಗರದಲ್ಲಿ ಒಂದೇ ಒಂದು ಶೌಚಾಲಯ ಕಟ್ಟಲಿಲ್ಲ. ಬಡವರಿಗೆ ಮನೆ ಕಟ್ಟಿಕೊಡಲಿಲ್ಲ, ರೈತರಿಗೆ ಪರಿಹಾರಗಳು ಸಿಗಲಿಲ್ಲ ಬದಲು ಜನ ಜೀವನ ಭಾರವಾಯಿತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್.ನಾಗರಾಜ್, ವಕ್ತಾರೆ ಪಲ್ಲವಿ, ಚಂದ್ರಭೂಪಾಲ್, ರಾಮೇಗೌಡ, ಚಂದನ್, ನಾಗರಾಜ್, ಶಬ್ಬೀರ್ ಅಹಮ್ಮದ್ ಇದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200