ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 2 MAY 2024
ELECTION NEWS : ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದ ವೇದಿಕೆ ಮೇಲೆ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕಾಣಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫಿಟ್ನೆಸ್ ಕುರಿತು ಶಿವರಾಜ್ ಕುಮಾರ್ ಮಾತು. ಸಿದ್ಧತೆಯಾಗಿದ್ದರೂ ಸಮಾವೇಶ ಉದ್ಘಾಟನೆಯೇ ಆಗದೆ ಮುಗಿತು. ಇದು ಪ್ರಮುಖ ಸೈಡ್ ಲೈನ್ ಸುದ್ದಿಗಳು
ಮೂರು ವಿಮಾನದಲ್ಲಿ ಗಣ್ಯರ ಆಗಮನ
ಪ್ರಜಾಧ್ವನಿ ಸಮಾವೇಶಕ್ಕೆ ಮೂರು ವಿಶೇಷ ವಿಮಾನದಲ್ಲಿ ಗಣ್ಯರು ಆಗಮಿಸಿದ್ದರು. ರಾಹುಲ್ ಗಾಂಧಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಒಂದು ವಿಮಾನದಲ್ಲಿ ಆಗಮಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ಪ್ರತ್ಯೇಕ ವಿಮಾನದಲ್ಲಿ ಬಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತೊಂದು ವಿಮಾನದಲ್ಲಿ ಬಂದಿದ್ದರು.
ವೇದಿಕೆ ಕೆಳಗೆ ಉಳಿದ ಗೀತಾ

ಅಲ್ಲಮಪ್ರಭು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ವೇದಿಕೆಯಿಂದ ಕೆಳಗೆ ಉಳಿದರು. ವೇದಿಕೆ ಕೆಳಗೆ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ವೇದಿಕೆ ಮುಂಭಾಗ ಸಭೀಕರೊಂದಿಗೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಅಭ್ಯರ್ಥಿಯ ಚುನಾವಣೆ ಖರ್ಚಿನಲ್ಲಿ ಈ ಕಾರ್ಯಕ್ರಮ ತೋರಿಸದೆ ಇರಲು ಈ ಕ್ರಮ ಅನುಸರಿಸಲಾಗಿದೆ.
ಹಾಗೆ ಉಳಿದ ಹಿಂಗಾರ
ಹಿಂಗಾರ ಬಿಡಿಸಿ ಕಾರ್ಯಕ್ರಮ ಉದ್ಘಾಟಿಸಲು ಯೋಜಿಸಲಾಗಿತ್ತು. ಆದರೆ ಗಣ್ಯರು ವೇದಿಕೆಗೆ ಆಗಮಿಸುತ್ತಿದ್ದಂತೆ ತರಾತುರಿಯಲ್ಲಿ ಸಾಲು ಸಾಲು ಭಾಷಣಗಳು ನಡೆದವು. ಹಾಗಾಗಿ ಉದ್ಘಾಟನೆಗೆ ತಂದಿದ್ದ ಹಿಂಗಾರ ಹಾಗೆ ಉಳಿದು ಹೋದವು. ಉದ್ಘಾಟನೆಯೇ ಆಗದೆ ಕಾರ್ಯಕ್ರಮ ಮುಗಿಯಿತು.
ಭಾಷಾಂತರ ವೇಳೆ ಗೊಂದಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದಿಯಲ್ಲಿ ಭಾಷಣ ಮಾಡಿದರು. ಸಭೆಯಲ್ಲಿ ಸೇರಿದ್ದವರಿಗೆ ಭಾಷಣ ಅರ್ಥವಾಗಲಿ ಎಂದು ಭಾಷಾಂತರ ಮಾಡಲಾಯಿತು. ಸಚಿವ ಮಧು ಬಂಗಾರಪ್ಪ ಭಾಷಾಂತರ ಮಾಡುತ್ತಿದ್ದರು. ಸ್ವಲ್ಪ ಹೊತ್ತಿಗೆ ಮಧು ಬಂಗಾರಪ್ಪ ಗೊಂದಲಕ್ಕೀಡಾದರು. ಭಾಷಾಂತರ ನಿಲ್ಲಸಿ ರಾಹುಲ್ ಗಾಂಧಿ ಅವರಿಗೆ ಕ್ಷಮೆ ಕೇಳಿದರು. ನಂತರ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಭಾಷಾಂತರ ಮುಂದುವರೆಸಿದರು.
ರಾಹುಲ್ ಗಾಂದಿ ಫಿಟ್ನೆಸ್‌ಗೆ ಶಿವಣ್ಣ ಫಿದಾ
ವೇದಿಕೆಯಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ರಾಹುಲ್ ಗಾಂಧಿ ಫಿಟ್ನೆಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ನಾನು ರಾಹುಲ್ ಗಾಂಧಿ ಅವರ ಅಭಿಮಾನಿ. ಅವರ ಫಿಟ್ನೆಸ್ ನನಗೆ ಅಚ್ಚುಮೆಚ್ಚು. ಯಾರು ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಾರೋ ಅವರು ದೇಶವನ್ನು ಫಿಟ್ ಮತ್ತು ಬಲಿಷ್ಠವಾಗಿ ಆಗಿ ಇಟ್ಟುಕೊಳ್ಳುತ್ತಾರೆ’ ಎಂದರು.
ಇದನ್ನೂ ಓದಿ – ಮೈಸೂರು – ತಾಳಗುಪ್ಪ ಸೇರಿ ರಾಜ್ಯದ ವಿವಿಧೆಡೆಗೆ ಚುನಾವಣೆಗಾಗಿ ವಿಶೇಷ ರೈಲು, ಟೈಮಿಂಗ್ ಏನು?






