ಶಿವಮೊಗ್ಗ ಲೋಕಸಭೆಗೆ ಕಾಂಗ್ರೆಸ್‌ನಿಂದ ‘ಅಚ್ಚರಿ ಅಭ್ಯರ್ಥಿ’, ಈ ಇಬ್ಬರ ಪೈಕಿ ಕಣಕ್ಕಿಳಿಯೋದು ಯಾರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

SHIVAMOGGA LIVE NEWS | 27 FEBRUARY 2024

SHIMOGA : ಲೋಕಸಭೆ ಚುನಾವಣೆಯ ಕಾವು ಏರುತ್ತಿದೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಕಣಕ್ಕಿಳಿಯುವುದು ನಿಶ್ಚಿತ. ಈ ಹಿನ್ನೆಲೆ ಪ್ರಚಾರ ಕಾರ್ಯವು ಆರಂಭವಾಗಿದೆ. ಇತ್ತ ಕಾಂಗ್ರೆಸ್‌ ಪಕ್ಷದಲ್ಲಿ ಅಭ್ಯರ್ಥಿ ಇನ್ನು ನಿಗದಿಯಾಗಿಲ್ಲ. ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದು ಕುತೂಹಲ ಮೂಡಿಸಲಾಗಿದೆ.

ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷದಲ್ಲಿ ಸೊರಬ ಮತ್ತು ಭದ್ರಾವತಿ ಹೊರತು ಉಳಿದೆಲ್ಲೆಡೆ ಒಬ್ಬರಿಗಿಂತಲು ಹೆಚ್ಚು ಆಕಾಂಕ್ಷಿಗಳಿದ್ದರು. ಆದರೆ ಒಂದೇ ವರ್ಷದಲ್ಲಿ ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಬದಲಾಗಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳೆ ಇಲ್ಲವಾಗಿದ್ದಾರೆ. ಈವರೆಗೂ ಟಿಕೆಟ್‌ಗಾಗಿ ಪೈಪೋಟಿ ನಡೆಸಿದವರು ಈಗ ‘ಪಕ್ಷ ಸೂಚಿಸಿದವರ ಪರ ಕೆಲಸ ಮಾಡಲು ಸಿದ್ಧʼ ಎಂದು ತಿಳಿಸುತ್ತಿದ್ದಾರೆ.

ಯಾರೆಲ್ಲರ ಹೆಸರು ಚಾಲ್ತಿಯಲ್ಲಿದೆ?

ಕೆಲವು ತಿಂಗಳ ಹಿಂದೆ ಶಾಸಕ ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್‌, ಗೀತಾ ಶಿವರಾಜ್‌ಕುಮಾರ್‌ ಅವರ ಹೆಸರು ಚಾಲ್ತಿಯಲ್ಲಿದ್ದವು. ಬದಲಾದ ಸಂದರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿದ್ದಾರೆ. ಸುಂದರೇಶ್‌ ಅವರು, ‘ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷವು ಸರ್ವೆ ನಡೆಸುತ್ತಿದೆ. ಯಾರಿಗೆ ಟಿಕೆಟ್‌ ನೀಡಿದರೂ ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

-Congress-Party-Office-Shimoga

ಸದ್ಯ ಗೀತಾ ಶಿವರಾಜ್‌ಕುಮಾರ್‌ ಮತ್ತು ಸಚಿವ ಮಧು ಬಂಗಾರಪ್ಪ ಅವರ ಹೆಸರು ಮುನ್ನಲೆಯಲ್ಲಿದೆ. 2014ರಲ್ಲಿ ಜೆಡಿಎಸ್‌ ಪಕ್ಷದಿಂದ ಸಂಸತ್‌ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಶಿವರಾಜ್‌ಕುಮಾರ್‌ ಅವರು 2.40 ಲಕ್ಷ ಮತ ಪಡೆದಿದ್ದರು. ಈ ಬಾರಿ ಅವರನ್ನೆ ಕಣಕ್ಕಿಳಿಸಿದರೆ ಸೂಕ್ತ ಎಂಬ ಲೆಕ್ಕಾಚಾರವಿದೆ.

ಮತ್ತೊಂದೆಡೆ ಸಚಿವ ಮಧು ಬಂಗಾರಪ್ಪ ಅವರನ್ನೆ ಕಣಕ್ಕಿಳಿಸಬೇಕು ಎಂಬ ವಾದವು ಇದೆ. 2018ರ ಲೋಕಸಭೆ ಉಪ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು. ದೊಡ್ಡ ಮೊತ್ತದ ಮತಗಳನ್ನು ಪಡೆದಿದ್ದರು. ಬಿಜೆಪಿಯ ಬಿ.ವೈ.ರಾಘವೇಂದ್ರ ಅವರಿಗೆ ಪೈಪೋಟಿ ಒಡ್ಡಿದ್ದರು. ಈ ಹಿನ್ನೆಲೆ ಈ ಬಾರಿಯು ಮಧು ಬಂಗಾರಪ್ಪ ಅವರನ್ನೆ ಕಣಕ್ಕಿಳಿಸಬೇಕು ಎಂಬ ಚರ್ಚೆ ಇದೆ.

ಯಾರಾಗ್ತಾರೆ ಅಚ್ಚರಿ ಅಭ್ಯರ್ಥಿ?

ಕಾಂಗ್ರೆಸ್‌ ಪಕ್ಷದಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದು ಕುತೂಹಲ ಮೂಡಿಸಲಾಗಿದೆ. ಈತನಕ ಅಭ್ಯರ್ಥಿ ಕುರಿತು ಪಕ್ಷ ಸುಳಿವು ನೀಡಿಲ್ಲ. ಮುಖಂಡರಿಗು ಇದೇ ಕುತೂಹಲವಿದೆ. ಸದ್ಯ ಗ್ಯಾರಂಟಿ ಯೋಜನೆಗಳು ಮನೆ ಮನೆಗು ತಲುಪಿರುವುದನ್ನೆ ಮುನ್ನಲೆಯಲ್ಲಿಟ್ಟುಕೊಂಡು ಪ್ರಚಾರ ನಡೆಸಲಾಗುತ್ತಿದೆ.

ಇದನ್ನೂ ಓದಿ – ನಟ ದರ್ಶನ್‌ ವಿರುದ್ಧ ಶಿವಮೊಗ್ಗದಲ್ಲಿ ಮಹಿಳೆಯರಿಂದ ದೂರು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 27, 2024

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮುಂದುವರೆಯುತ್ತಾ ಮಳೆ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮುಂದುವರೆಯುತ್ತಾ ಮಳೆ? ಇಲ್ಲಿದೆ ಇಂದಿನ ಹವಾಮಾನ ವರದಿ

ಇವತ್ತು ತ್ರಯೋದಶಿ, ಶುಭ ಸಮಯ ಎಷ್ಟೊತ್ತಿಗಿದೆ? ಇಂದಿನ ಪಂಚಾಂಗ

ಇವತ್ತು ತ್ರಯೋದಶಿ, ಶುಭ ಸಮಯ ಎಷ್ಟೊತ್ತಿಗಿದೆ? ಇಂದಿನ ಪಂಚಾಂಗ

Bus falls off bridge near Bhadravathi, 30 injured

Bus falls off bridge near Bhadravathi, 30 injured

ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್‌, ಹೇಗಾಯ್ತು ಘಟನೆ?

ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್‌, ಹೇಗಾಯ್ತು ಘಟನೆ?

BREAKING NEWS – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

BREAKING NEWS – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

Leave a Comment