ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SHIMOGA | 15 ಏಪ್ರಿಲ್ 2022
ನಿರ್ದೋಷಿಯಾಗಿ ಬರುತ್ತೇನೆ. ಮತ್ತ ಮಂತ್ರಿ ಆಗಿಯೇ ಆಗುತ್ತೇನೆ. ಇದು ಸಚಿವ ಕೆ.ಎಸ್.ಈಶ್ವರಪ್ಪ ಅವರ ಭರವಸೆಯ ಮಾತುಗಳು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ನಗರ ಬಿಜೆಪಿ ಕಾರ್ಯಾಲಯ ಉದ್ಘಾಟನಾ ಸಮಾರಂಭದ ವೇಳೆ ಕಾರ್ಯಕರ್ತೆಯರು ಮತ್ತು ಅಭಿಮಾನಿಗಳು ಈಶ್ವರಪ್ಪ ಅವರನ್ನು ಸುತ್ತುವರೆದರು. ರಾಜೀನಾಮೆ ನೀಡದಂತೆ ಒತ್ತಾಯಿಸಿದರು.
ಕಣ್ಣೀರು ಹಾಕಿದ ಮಹಿಳೆಯರು
ಈಶ್ವರಪ್ಪ ಅವರನ್ನು ಸುತ್ತುವರೆದ ಮಹಿಳಾ ಅಭಿಮಾನಿಗಳು ರಾಜೀನಾಮೆ ಕೊಡಬೇಡಿ ಎಂದು ಮನವಿ ಮಾಡಿದರು. ಕೆಲವು ಮಹಿಳೆಯರು ಈಶ್ವರಪ್ಪ ಅವರ ಮುಂದೆ ಕಣ್ಣೀರು ಹಾಕಿದರು. ರಾಜೀನಾಮೆ ಕೊಡಬಾರದು ಎಂದು ಘೋಷಣೆ ಕೂಗಿದರು.
ಮತ್ತೆ ಮಂತ್ರಿಯಾಗಿ ಬರುತ್ತೇನೆ
ಈ ಸಂದರ್ಭ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಈಗ ನನ್ನ ಮೇಲೆ ಒಂದು ಆರೋಪ ಹೊರೆಸಿದ್ದಾರೆ. ನಾನು ಮಂತ್ರಿಯಾಗಿದ್ದರೆ ತನಿಖೆ ಮೇಲೆ ಪ್ರಭಾವ ಉಂಟಾಗಲಿದೆ ಅನ್ನುವ ಭಾವನೆ ಇರುತ್ತದೆ. ಅದಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಿರ್ದೋಷಿಯಾಗಿ ಬರುತ್ತೇನೆ. ಮತ್ತೆ ಮಂತ್ರಿ ಆಗಿಯೇ ಆಗುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ | ಗೋಪಿ ಸರ್ಕಲ್’ನಲ್ಲಿ ಟೈರ್’ಗೆ ಬೆಂಕಿ ಹಚ್ಚಿ ಆಕ್ರೋಶ
ಈ ಮೇಲ್ – [email protected]
WhatsApp Number – 7411700200